ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಯಾಲಿಸೀಸ್ ಯಂತ್ರಗಳು ಕೆಟ್ಟು ಹೋಗಿದ್ದು,ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಡಯಾಲಿಸೀಸ್ ಘಟಕ ಪರಿಶೀಲಿಸಿದ ಮಾಜಿ ಶಾಸಕಿ, "3 ದಿನಗಳಿಂದ ಡಯಾಲಿಸೀಸ್ ಘಟಕದ 5 ಯಂತ್ರಗಳಲ್ಲಿ ಈಗ 3 ಮಾತ್ರ ಕಾರ್ಯಾಚರಿಸುತ್ತಿದೆ. ಇನ್ನುಳಿದ 2 ಯಂತ್ರಗಳು ಹಾಳಾಗಿದ್ದು, ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಆಗಮಿಸಿದ್ದೇನೆ. ಈಗ 3 ಯಂತ್ರಗಳ ಮೂಲಕವೇ ದಿನಕ್ಕೆ 25 ರೋಗಿಗಳಿಗೆ ಡಯಾಲಿಸೀಸ್ ಮಾಡಬೇಕಾಗಿದೆ.
ಆಸ್ಪತ್ರೆಯಲ್ಲಿ 45 ಡಯಾಲಿಸೀಸ್ ರೋಗಿಗಳಿದ್ದು, ಇರುವ ಯಂತ್ರಗಳ ಮೇಲೆಯೇ ಹೆಚ್ಚಿನ ಒತ್ತಡ ಬೀಳುವುದರಿಂದ ಯಂತ್ರ ಹಾಳಾಗುತ್ತಿವೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಬಳಿ ಮಾತನಾಡಿದ್ದು, ಕೂಡಲೇ ಯಂತ್ರ ಸಜ್ಜುಗೊಳಿಸುವ ಭರವಸೆ ನೀಡಿದ್ದಾರೆ" ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
Kshetra Samachara
02/02/2022 04:55 pm