ಉಡುಪಿ: ಮಲ್ಪೆ ಸಮುದ್ರದಲ್ಲಿ ಆತ್ಮಹತ್ಯೆಗೆ ಯತ್ನಿಸಿ ರಕ್ಷಿಸಲ್ಪಟ್ಟ ಮಾನಸಿಕ ಖಿನ್ನತೆಗೊಳಪಟ್ಟ ಮಹಿಳೆಯನ್ನು ವಿಶು ಶೆಟ್ಟಿ ,ಹಿರಿಯ ಸಾಮಾಜಿಕ ಕಾರ್ಯಕರ್ತೆ ಐರಿನ್ ಅಂದ್ರಾದೆ ಸಹಾಯದಿಂದ ಬಾಳಿಗಾ ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.
ಮಹಿಳೆಯು ಕೋಟ ಠಾಣಾ ವ್ಯಾಪ್ತಿಯವರಾಗಿದ್ದು ತಂದೆ ತಾಯಿ ತೀರಿಕೊಂಡಿದ್ದು, ಒಂಟಿಯಾಗಿ ವಾಸಿಸುತ್ತಿದ್ದರು. ತಾನು ಮಾನಸಿಕವಾಗಿ ಬಹಳಷ್ಟು ನೊಂದಿದ್ದೇನೆ, ಬದುಕು ಹಿಂಸೆಯಾಗಿದೆ, ನಾನು ಮರಳಿ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾಳೆ. ವಿಷಯ ತಿಳಿದ ವಿಶು ಶೆಟ್ಟಿ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಲು ಕಾನೂನು ಪ್ರಕ್ರಿಯೆ ಬಹಳ ವಿಳಂಬವಾದರೂ ನಡೆಯದ ಕಾರಣ ಕೊನೆಗೆ ಕಾನೂನು ಪ್ರಾಧಿಕಾರದ ನ್ಯಾಯಧೀಶೆ ಶರ್ಮಿಳಾರವರಿಗೆ ನಡೆದ ವಿಚಾರ ವಿಶು ಶೆಟ್ಟಿ ತಿಳಿಸಿ, ಆಸ್ಪತ್ರೆಗೆ ದಾಖಲಿಸುವಂತಾಯಿತು.
ರಾಜ್ಯ ಮಹಿಳಾ ಸಹಾಯವಾಣಿಗೆ ಮಹಿಳೆಯ ಮುಂದಿನ ರಕ್ಷಣೆ ಹಾಗೂ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.
Kshetra Samachara
19/01/2022 11:56 am