ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜನರಿಗೆ ಹಲ್ಲೆ; ಮಾನಸಿಕ ಅಸ್ವಸ್ಥನ ಸ್ಥಿತಿಗೆ 'ಸಹೃದಯಿ' ಸ್ಪಂದನೆ

ಉಡುಪಿ: ಮಲ್ಪೆ ಠಾಣೆ ವ್ಯಾಪ್ತಿಯ ಕೊಡವೂರಿನಲ್ಲಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಜನರಿಗೆ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದ. ತನ್ನ ತಂದೆಗೂ ಹಲ್ಲೆ ನಡೆಸಲು ಪ್ರಯತ್ನಿಸಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿದ ವಿಶು ಶೆಟ್ಟಿ ಅಂಬಲಪಾಡಿ ಅವರು ಯುವಕನನ್ನು ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದರು.

ಮಹೇಶ್ ಭಟ್ ಎಂಬ ಈ ಯುವಕ ತನ್ನ ತಾಯಿಯ ನಿಧನದ ನಂತರ ಮಾನಸಿಕ ವ್ಯಾಧಿಗೆ ತುತ್ತಾಗಿ ಬೀದಿಗೆ ಬಿದ್ದಿದ್ದ. ಬಹಳಷ್ಟು ಸಾರ್ವಜನಿಕರಿಗೆ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕರೂ ಈತನಿಗೆ ಬಾರಿಸಿದ್ದರು. 3 ವರ್ಷಗಳ ಹಿಂದೆ ಈತನ ಉಪಟಳ ತಾಳಲಾಗದೆ ಸಾರ್ವಜನಿಕರು ಹಗ್ಗದಿಂದ ಕೈ- ಕಾಲು ಕಟ್ಟಿ ಹಾಕಿದ್ದರು. ಆಗ ವಿಶು ಶೆಟ್ಟಿ ಅಸ್ವಸ್ಥನನ್ನು ರಕ್ಷಿಸಿ ದೀರ್ಘಕಾಲದ ನಿರಂತರ ಚಿಕಿತ್ಸೆ ಕೊಡಿಸಿದಾಗ ಯುವಕ ಸಹಜ ಸ್ಥಿತಿಗೆ ಬಂದಿದ್ದ.

ಆದರೆ, ಕಳೆದ ಕೆಲವು ತಿಂಗಳಿಂದ ಯುವಕ ಔಷಧ ಸೇವಿಸದ ಕಾರಣ ಮಾನಸಿಕ ಖಾಯಿಲೆ ಉಲ್ಭಣಗೊಂಡು ಮೊದಲಿನ ಸ್ಥಿತಿಗೆ ಬಂದಿದ್ದು ಸಾರ್ವಜನಿಕರಿಗೆ ಪುನಃ ತೊಂದರೆ ನೀಡಿ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಯುವಕನ ತಂದೆ ಮಾತನಾಡಿ, "ಮಗನಿಗೆ ಚಿಕಿತ್ಸೆ ನೀಡಿ ಸಾಕಿ- ಸಲಹಲು ಸಾಧ್ಯವಿಲ್ಲ. ನಾನು ಅಸಹಾಯಕನಾಗಿದ್ದೇನೆ. ಅವನಿಗೆ ಬೇರೆ ನೆಲೆ ಕಲ್ಪಿಸಿ" ಎಂದು ವಿಶು ಶೆಟ್ಟಿಯವರಲ್ಲಿ ಅಂಗಲಾಚಿದ್ದಾರೆ.

Edited By : Shivu K
Kshetra Samachara

Kshetra Samachara

08/01/2022 07:14 pm

Cinque Terre

18.48 K

Cinque Terre

0

ಸಂಬಂಧಿತ ಸುದ್ದಿ