ಮುಲ್ಕಿ: ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದ, ಅಂತರಿಕ ಗುಣಮಟ್ಟ ಖಾತರಿಕೋಶ (IQAC), ಸಹಯೋಗದಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ, ಯತ್ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ ಘಟಕಗಳ ಸಹಕಾರದೊಂದಿಗೆ ಮುಲ್ಕಿ ವಿಜಯ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.
ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಅಚ್ಚುತ ಕುಡ್ವ ಕಾರ್ಯಕ್ರಮನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ರಕ್ತದಾನ ಶ್ರೇಷ್ಠ ದಾನ ವಾಗಿದ್ದು ರಕ್ತದಾನದ ಮೂಲಕ ಜೀವ ಉಳಿಸಿ ಎಂದರು. ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಹಾಸ್ ಹೆಗ್ಡೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಕರಾವಳಿ ಯುವಕ ಯುವತಿ ವೃಂದದ ಗೌರವಾಧ್ಯಕ್ಷ ಗೋವರ್ಧನ ಕೋಟ್ಯಾನ್ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀಮಣಿ, ಕರಾವಳಿ ಯುವಕ-ಯುವತಿ ವೃಂದದ ಅಧ್ಯಕ್ಷೆ ಪವಿತ್ರ ಗಿರೀಶ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸಂಪತ್ ಕುಮಾರ್, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಹಮೀದಾ ಬೇಗಂ, ಡಾ| ಮಾನಸಿ ಮತ್ತಿತರು ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಅಧಿಕಾರಿ ಜಿತೇಂದ್ರ ವಿ.ರಾವ್ ಸ್ವಾಗತಿಸಿದರು ಎನ್.ಸಿ.ಸಿ. ಆಫೀಸರ್ ರಾಜೇಶ್ ಧನ್ಯವಾದ ಅರ್ಪಿಸಿದರು . ಸುಲೋಚನಾ ಏವೈ, ಆಚಾರ್ಯ ನಿರೂಪಿಸಿದರು. ಬಳಿಕ ರಕ್ತದಾನ ಶಿಬಿರ ನಡೆಯಿತು.
Kshetra Samachara
10/12/2021 04:34 pm