ಉಡುಪಿ: ಧನ್ವಂತರಿ ಆಯುರ್ವೇದ ಆಸ್ಪತ್ರೆ ವತಿಯಿಂದ ಮೆಡಿಟೆಕ್ ಇಂಡಿಯಾ ಸಂಸ್ಥೆ ಸಹಯೋಗದೊಂದಿಗೆ ಉಚಿತ ಎಲುಬು ಸಾಂದ್ರತೆ ತಪಾಸಣೆ ಶಿಬಿರವು ನ.28ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಗುಂಡಿಬೈಲು ಮಣಿಪಾಲ ರಸ್ತೆಯಲ್ಲಿರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ.
ಶಿಬಿರದಲ್ಲಿ ಮೂಳೆ ಖನಿಜ ಸಾಂದ್ರತೆ (ಬಿಎಂಡಿ) ಪರೀಕ್ಷೆಯು ಮೂಳೆಯ ಪ್ರದೇಶದಲ್ಲಿ ಎಷ್ಟು ಕ್ಯಾಲ್ಸಿಯಂ ಮತ್ತು ಇತರೆ ರೀತಿಯ ಖನಿಜಗಳನ್ನು ಅಳೆಯುತ್ತಿದೆ. ಈ ಪರೀಕ್ಷೆಯು ಆರೋಗ್ಯ ರಕ್ಷಣೆ, ಆಸ್ಟಿಯೊಪೊರೋಸಿಸ್ ಪತ್ತೆ ಹಚ್ಚಲು ಮತ್ತು ಮೂಳೆ ಮುರಿತದ ಅಪಾಯವನ್ನು ಊಹಿಸಲು ಸಹಾಯ ಮಾಡುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸತ್ಯಜಿತ್ ಕಡಕೋಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೆಡಿಟೆಕ್ ಇಂಡಿಯಾ ಸಂಸ್ಥೆಯ ಮಾಲಕ ಪ್ರಮೋದ್ ಹೆಗ್ಡೆ ಉಪಸ್ಥಿತರಿದ್ದರು.
Kshetra Samachara
27/11/2021 07:42 pm