ಉಡುಪಿ: ಕಳೆದ 3 ದಿನಗಳಿಂದ ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳಿಗೆ ವೇತನ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಯುವಶಕ್ತಿ ಕರ್ನಾಟಕ ವತಿಯಿಂದ ನಡೆಯುತಿದ್ದ ಅಹೋರಾತ್ರಿ ಧರಣಿಗೆ ತಾರ್ಕಿಕ ಜಯ ಲಭಿಸಿದೆ.
ಇಂದು ಉಡುಪಿ ಜಿಲ್ಲಾ ಸರ್ಜನ್ ಡಾ. ಮದುಸೂದನ್ ರಾವ್ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಧರಣಿಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಉಡುಪಿ ಸೇರಿದಂತೆ ರಾಜ್ಯದ 23 ಜಿಲ್ಲೆಗಳ 122 ಡಯಾಲಿಸಿಸ್ ಕೆಂದ್ರಗಳಲ್ಲಿನ ಅವ್ಯವಸ್ಥೆ ಸರಿಪಡಿಸುವಿಕೆ ಮತ್ತು ಸಿಬ್ಬಂದಿಗಳ ವೇತನ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಹೋರಾತ್ರಿ ಧರಣಿಯನ್ನು ನಡೆಸುತಿತ್ತು.
ನಿನ್ನೆ ಉಡುಪಿ ಜಿಲ್ಲಾಸ್ಪತ್ರೆ ಸಿಬ್ಬಂದಿಯ ವೇತನ ಪಾವತಿಗಾಗಿ 13 ಲಕ್ಷ ರೂ.ಸರಕಾರದಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡಲಾಗಿದೆ.
Kshetra Samachara
18/11/2021 11:23 am