ಮಣಿಪಾಲ:ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಣಿಪಾಲ್ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ (MCCCC) ತನ್ನ 3 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಡಾ. ಅನಿಲ್ ಡಿ ಕ್ರೂಜ್, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಶ್ರೀಮತಿ ವಸಂತಿ ಆರ್ ಪೈ, ಟ್ರಸ್ಟಿ, ಮಾಹೆ ಟ್ರಸ್ಟ್, ಮಣಿಪಾಲ, ಲೆಫ್ಟಿನೆಂಟ್ ಜನರಲ್ (ಡಾ) ಎಮ್ ಡಿ ವೆಂಕಟೇಶ್ - ಉಪಕುಲಪತಿ, ಮಾಹೆ ಮಣಿಪಾಲ, ಡಾ. ಪಿಎಲ್‌ಎನ್‌ಜಿ ರಾವ್ ಸಹ ಉಪಕುಲಪತಿಗಳು , ಆರೋಗ್ಯ ವಿಜ್ಞಾನ ವಿಭಾಗ, ಮಾಹೆ ಮಣಿಪಾಲ ಅವರು ಗೌರವ ಅತಿಥಿಗಳಾಗಿದ್ದರು. ಮಾಹೆ ಮಣಿಪಾಲದ ಸಹ ಕುಲಪತಿಗಳಾದ ಡಾ. ಎಚ್.ಎಸ್.ಬಲ್ಲಾಲ್ - ಅಧ್ಯಕ್ಷತೆ ವಹಿಸಿದ್ದರು.
ಡಾ.ಅನಿಲ್ ಡಿ ಕ್ರೂಜ್ ಮುಖ್ಯ ಭಾಷಣ ಮಾಡಿದರು. ಕ್ಯಾನ್ಸರ್ ತಡೆಗಟ್ಟುವ ಪ್ರಾಮುಖ್ಯತೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಚಿಕಿತ್ಸೆಯ ಸಮಾನತೆ , ವೆಚ್ಚ-ಪರಿಣಾಮಕಾರಿ ನವೀನ ಕ್ಯಾನ್ಸರ್ ಸಂಶೋಧನೆ ಮತ್ತು ಗುಣಮಟ್ಟದ ಜೀವನ ಕ್ರಮಗಳ ಕುರಿತು ಮಾತನಾಡಿದರು .
ಶ್ರೀಮತಿ ವಸಂತಿ ಆರ್ ಪೈ ಅವರು ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಮ್ ಗೆ ಚಾಲನೆ ನೀಡಿ ಮತ್ತು ತಮ್ಮ ಭಾಷಣದಲ್ಲಿ ಸಮುದಾಯ ಸಂಪರ್ಕ ಕಾರ್ಯಕ್ರಮಗಳ ಪ್ರಾಮುಖ್ಯತೆ ಮತ್ತು ಕ್ಯಾನ್ಸರ್ ಗೆ ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಆರೋಗ್ಯ ಶಿಕ್ಷಣದ ಮಹತ್ವವನ್ನು ಹೇಳಿದರು.
ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಮಾಹೆಯ ಮುಂಬರುವ ಯೋಜನೆಗಳಾದ ಮಾರಣಾಂತಿಕ ಕಾಯಿಲೆ ಇರುವ ರೋಗಿಗಳಿಗೆ ಅವಶ್ಯವಾದ ಮಣಿಪಾಲ್ ವಿಶ್ರಾಂತಿ ಮತ್ತು ಉಪಶಾಮಕ ಆರೈಕೆ ಕೇಂದ್ರ ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಮನೆಯಿಂದ ಹೊರಗೆ ಮನೆ ಸೌಲಭ್ಯದ ಕುರಿತು ಚರ್ಚಿಸಿದರು. ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಅತ್ಯುತ್ತಮ ಕೈಗೆಟುಕುವ ಗುಣಮಟ್ಟದ ಆರೈಕೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ಪುನರುಚ್ಚರಿಸಿದರು.
ಡಾ. ಪಿ ಎಲ್ ಎನ್ ಜಿ ರಾವ್ ಅವರು ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸಲು ಹೊಸ ಔಷಧ ಆವಿಷ್ಕಾರದ ಅಗತ್ಯತೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಅದರ ಲಭ್ಯತೆ ಮತ್ತು ಕೈಗೆಟಕುವ ದರದ ಅವಶ್ಯಕತೆಗಳ ಕುರಿತು ಮಾಹಿತಿ ನೀಡಿದರು.
Kshetra Samachara
11/11/2021 05:08 pm