ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ ಕೆಎಂಸಿಯಲ್ಲಿ ವಿಶ್ವ ರೇಡಿಯಾಲಜಿ ದಿನಾಚರಣೆ

ಮಣಿಪಾಲ: ಎಕ್ಸ್-ರೇಡಿಯೇಶನ್ ಅಥವಾ ಎಕ್ಸ್-ಕಿರಣಗಳ (X Rays)  ಆವಿಷ್ಕಾರದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 8 ರಂದು ವಿಶ್ವ ವಿಕಿರಣಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ. 1895 ರಲ್ಲಿ ಈ ದಿನ, ಜರ್ಮನ್ ವಿಜ್ಞಾನಿ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಎಕ್ಸ್-ರೇಡಿಯೇಶನ್, ಎಕ್ಸ್-ಕಿರಣಗಳ (X Rays) ಆವಿಷ್ಕಾರವನ್ನು ಪೂರ್ಣಗೊಳಿಸಿದರು. 1901 ರಲ್ಲಿ, ಅವರು ಈ ಸಾಧನೆಗಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾದರು.

ಇದರ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರೇಡಿಯೋ ಡೈಗನೊಸಿಸ್ ವಿಭಾಗವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್- ಅವರು ಕಾರ್ಯಕ್ರಮ ಉದ್ಘಾಟಿಸಿ ಮತ್ತು ಮಾಹಿತಿ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ " ವಿಕಿರಣಶಾಸ್ತ್ರ ದಿನದ ಈ ವರ್ಷದ ಧ್ಯೇಯ ವಾಕ್ಯ 'ಇಂಟರ್ವೆನ್ಷನಲ್ ರೇಡಿಯಾಲಜಿ - ರೋಗಿಗೆ ಸಕ್ರಿಯ ಆರೈಕೆ'. "ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಇಂಟರ್ವೆನ್ಷನಲ್ ರೇಡಿಯಾಲಜಿ ವಹಿಸುವ ಪ್ರಮುಖ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ರೇಡಿಯಾಲಜಿ ವಿಭಾಗವು ರೋಗ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು .

ಕಾರ್ಯಕ್ರಮದ ಗೌರವ ಅತಿಥಿಯಾಗಿ ಮಾತನಾಡಿದ  ಕೆಎಂಸಿ ಡೀನ್ ಡಾ.ಶರತ್ ಕೆ ರಾವ್ ಅವರು "ಎಕ್ಸ್ ರೇ  ಆವಿಷ್ಕಾರ ಹಲವು ವಿಶೇಷ ವಿಭಾಗಗಳು  ಮತ್ತು ಉಪವಿಭಾಗಗಳಿಗೆ  ಜನ್ಮ ನೀಡಿದ್ದು, ಎಕ್ಸ್ ರೇ  ಇಂದು ಹಲವು ವಿಭಾಗಗಳಿಗೆ  ಬ್ರೆಡ್ ಮತ್ತು ಬಟರ್ ಇದ್ದಂತೆ  ಆಗಿದೆ " ಎಂದರು.

ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಮುಖ್ಯನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ್ಣ , ವೈದ್ಯಕೀಯ ಅಧೀಕ್ಷಕರಾದ  ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ರೇಡಿಯೋ ಡಯಾಗ್ನೋಸಿಸ್ ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶಿನಿ ಕೆ ಅವರು ಕಾರ್ಯಕ್ರಮದ ಕುರಿತು  ಅವಲೋಕನವನ್ನು ನೀಡಿದರು. ಡಾ. ರಾಜಗೋಪಾಲ್ ಕೆ ವಿ- ರೇಡಿಯೋ ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕರು, ಸಭೆಯನ್ನು ಸ್ವಾಗತಿಸಿದರು. ಡಾ ಚೇತನ್ ಕುಮಾರ್ ಎಂ ಧನ್ಯವಾದಗೈದರು.

Edited By : PublicNext Desk
Kshetra Samachara

Kshetra Samachara

09/11/2021 05:11 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ