ಮರವಂತೆ: ಕೊರೋನಾ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆಯ ಸೇವೆ ಮಹತ್ವವಾದುದ್ದು, ಆರೋಗ್ಯ ಇಲಾಖೆ ಸಿಬ್ಬಂದಿ, ಹಳ್ಳಿ ಹಳ್ಳಿಗೂ ತೆರಳಿ ವ್ಯಾಕ್ಸಿನೇಷನ್ ಮಾಡ್ತಿದ್ದಾರೆ. ಅದರಂತೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ದೋಣಿಯಲ್ಲಿ ತೆರಳಿ, ಕುದೃಗೊಡ್ ಪ್ರದೇಶದ ನಿವಾಸಿಗಳಿಗೆ ವ್ಯಾಕ್ಸಿನೇಷನ್ ನೀಡಿದ್ದಾರೆ. ಪ್ರಾಥಮಿಕ ಕೇಂದ್ರದ ನರ್ಸ್ ಮಿತ್ರಾ ಹಾಗೂ ರಾಜೇಶ್ವರಿ ಮತ್ತು ಆಶಾ ಕಾರ್ಯಕರ್ತೆ ದೇವಕಿ ಹಾಗೂ ಸಾಕು,ದೋಣಿಯಲ್ಲಿ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಆರೋಗ್ಯ ಇಲಾಖಾ ಸಿಬ್ಬಂದಿಗಳ ಸೇವೆಗೆ ಜಿಲ್ಲೆಯಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Kshetra Samachara
29/09/2021 06:21 pm