ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೀನುಗಾರ ಸಮುದಾಯಕ್ಕೆ ಕೆಪಿಸಿಸಿ ವತಿಯಿಂದ ಆಂಬುಲೆನ್ಸ್ ಹಸ್ತಾಂತರ

ಉಡುಪಿ: ಕೆಪಿಸಿಸಿ ವತಿಯಿಂದ ಮಲ್ಪೆಯ ಮೀನುಗಾರ ಸಮುದಾಯಕ್ಕೆ ಇವತ್ತು ಆಂಬುಲೆನ್ಸ್ ಹಸ್ತಾಂತರ ಮಾಡಲಾಯಿತು.ಈ ಮೊದಲು ಡಿ.ಕೆ ಶಿವಕುಮಾರ್ ಮಲ್ಪೆಗೆ ಬಂದಾಗ ಮೀನುಗಾರ ಸಮುದಾಯದವರು ಆಂಬುಲೆನ್ಸ್ ನ ಬೇಡಿಕೆ ಇಟ್ಟಿದ್ದರು.ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಂಬುಲೆನ್ಸ್ ಕಳುಸಿಕೊಟ್ಟಿದ್ದು ಇವತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಭವನದ ಮುಂಭಾಗ ಆಂಬುಲೆನ್ಸ್ ನ ಕೀಯನ್ನು ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಪ್ರಮೋದ್ ಮಧ್ವರಾಜ್ ,ಮಲ್ಪೆ ಬಂದರಿನಲ್ಲಿ ಸಾವಿರಾರು ಬೋಟ್ ಗಳಿವೆ,ಸಾವಿರಾರು ಮೀನುಗಾರರಿದ್ದಾರೆ.ಅವಘಡಗಳಾದಾಗ ,ಯಾರಾದರೂ ನೀರಿಗೆ ಬಿದ್ದಾಗ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲೂ ವ್ಯವಸ್ಥೆಗಳಿರಲಿಲ್ಲ.ಇದನ್ನು ಮನಗಂಡು ಡಿ.ಕೆ ಶಿವಕುಮಾರ್ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.ಗಣೇಶ ಚತುರ್ಥಿ ದಿನವೇ ಆಂಬುಲೆನ್ಸ್ ಹಸ್ತಾಂತರ ಮಾಡಿದ್ದೇವೆ.ಆಂಬುಲೆನ್ಸ್ ಉಪಯೋಗಿಸುವ ಪ್ರಸಂಗ ಬಾರದೇ ಇರಲಿ,ಅವಘಡಗಳು ಸಂಭವಿಸದಿರಲಿ ಎಂದು ಹಾರೈಸಿದರು.ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು,ರಮೇಶ್ ಕಾಂಚನ್ ,ಯತೀಶ್ ಕರ್ಕೇರಾ,ಪ್ರಖ್ಯಾತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

10/09/2021 11:42 am

Cinque Terre

10.12 K

Cinque Terre

1

ಸಂಬಂಧಿತ ಸುದ್ದಿ