ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೇಷನ್ ಫಸ್ಟ್ ವತಿಯಿಂದ "ಫಿಟ್ ರಹೋ ಉಡುಪಿ" 75 ಕೀ.ಮೀ ಮ್ಯಾರಥಾನ್ ಗೆ ಚಾಲನೆ

ಉಡುಪಿ: ನೇಷನ್ ಫಸ್ಟ್ ತಂಡದ ವತಿಯಿಂದ "ಫಿಟ್ ರಹೋ ಉಡುಪಿ" ಎಂಬ ಧ್ಯೇಯವಾಕ್ಯದೊಂದಿಗೆ ಉಡುಪಿಯಲ್ಲಿ 75 ಕೀ.ಮೀ ಮ್ಯಾರಥಾನ್ ಆಯೋಜಿಸಲಾಗಿದೆ‌. ಮ್ಯಾರಥಾನ್ ಗೆ ಇಂದು ಬೆಳಿಗ್ಗೆ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಉಡುಪಿ ಚರ್ಚ್ ನ ಧರ್ಮಗುರುಗಳಾದ ಚಾರ್ಲ್ಸ್ ಮ್ಯಾನೇಜಸ್ ಚಾಲನೆ ನೀಡಿದರು.

ಉಡುಪಿ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್ ಗೆ ಚಾಲನೆ ನೀಡಲಾಯಿತು.ಸುರಿಯುವ ಮಳೆಯ ನಡುವೆಯೇ ಯುವಜನತೆ ಉತ್ಸಾಹದಿಂದ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಕೆ ರಘುಪತಿ ಭಟ್ ,ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ರಾಘವೇಂದ್ರ ಎ, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಸ್ಥಳೀಯ ನಗರಸಭಾ ಸದಸ್ಯರಾದ ಟಿ.ಜಿ ಹೆಗ್ಡೆ ಹಾಗೂ ನೇಶನ್ ಫಸ್ಟ್ ತಂಡದ ಸೂರಜ್ ಕಿದಿಯೂರು ಮತ್ತು ಪ್ರಮುಖರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

06/09/2021 08:41 am

Cinque Terre

18.68 K

Cinque Terre

0

ಸಂಬಂಧಿತ ಸುದ್ದಿ