ಉಡುಪಿ: ಉಡುಪಿಯ ಬಿ ಆರ್ ಶೆಟ್ಟಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮತ್ತೊಮ್ಮೆ ನೌಕರರು ಧರಣಿಯ ಮೊರೆ ಹೋಗಿದ್ದಾರೆ.
ಸಂಬಳ ನೀಡದ್ದಕ್ಕೆ ಕಳೆದೆರಡು ತಿಂಗಳಿನಿಂದ ಸಿಬ್ಬಂದಿಗಳು ಮಾಡುತ್ತಿರುವ ಮೂರನೇ ಧರಣಿ ಇದು.ಇದುಸರಕಾರಿ ಸ್ವಾಮ್ಯದ ಖಾಸಗಿ ನಿರ್ವಹಣೆಯ ಹೆರಿಗೆ ಆಸ್ಪತ್ರೆ ಎಂಬುದು ಗಮನಾರ್ಹ.ಇವತ್ತು ರಾತ್ರಿ ನಡೆದನೌಕರರ ಧರಣಿಗೆ ಶಾಸಕ ರಘುಪತಿ ಭಟ್ ಕೂಡ ಸಾಥ್ ನೀಡಿದ್ದಾರೆ!
ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಶಾಸಕರು ಗರಂ ಆಗಿದ್ದು,ನೌಕರರ ಅನುಕೂಲಕ್ಕೆ ಸರಕಾರದಿಂದ 50 ಲಕ್ಷ ಅನುದಾನ ಮಂಜೂರಾಗಿದ್ದರೂ ನೌಕರರಿಗೆ ನೀಡದ್ದಕ್ಕೆ ಶಾಸಕ ಭಟ್ ಕೆಂಡಾಮಂಡಲವಾಗಿದ್ದಾರೆ.ಸರಕಾರದ ಅನುದಾನ ನೌಕರರಿಗೆ ನೀಡದ ಆಡಳಿತ ಮಂಡಳಿ ವಿರುದ್ಧನೌಕರರ ಜೊತೆ ಧರಣಿ ಕುಳಿತ ಶಾಸಕ ರಘುಪತಿ ಭಟ್ ಗೆಜಿಲ್ಲಾ ಸರ್ಜನ್, ಡಿಎಚ್ ಒ ಕೂಡಾ ಸಾಥ್ ನೀಡಿದ್ದಾರೆ.ಬಿ.ಆರ್ ಶೆಟ್ಟಿ ಆಡಳಿತ ಮಂಡಳಿಯ ಬೇಜವಾಬ್ದಾರಿಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Kshetra Samachara
19/08/2021 09:23 pm