ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ವ್ಯಂಗ್ಯಚಿತ್ರ ಪ್ರದರ್ಶನ

ಉಡುಪಿ : ಉಡುಪಿಯ ದೊಡ್ಡಣಗುಡ್ಡೆಯಲ್ಲಿರುವ ಡಾ.ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ, ರೋಟರಿ ಕ್ಲಬ್ ಮಣಿಪಾಲ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರಾವಳಿ ಇದರ ಆಶ್ರಯದಲ್ಲಿ ಇಂದು ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹ ಪ್ರಯುಕ್ತ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಕ್ರಾಫ್ಟ್ಸ್ ಮಂತ್ರ ಇದರ ಸಂಸ್ಥಾಪಕಿ ರೇಣು ಜಯರಾಂ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಆಸ್ಪತ್ರೆಯ ನಿರ್ದೇಶಕ, ಮನೋವೈದ್ಯ ಡಾ. ಪಿ ವಿ ಭಂಡಾರಿ, ಪೋಷಕರಿಗೆ ಕುಡಿತದ ಚಟ ಇದ್ದರೆ ಮಕ್ಕಳು ಕೂಡ ಆ ಚಟವನ್ನು ಬೆಳೆಸಿಕೊಳ್ಳುತ್ತಾರೆ. ಕೆಲವು ಬಾರಿ ಅವರ ಮಕ್ಕಳು ಎಲ್ಲ ಚಟಗಳಿಂದ ದೂರವಿರುವ ಸಾಧ್ಯತೆಯೂ ಇರುತ್ತದೆ. ಮುಖ್ಯವಾಗಿ ಮಕ್ಕಳು ಒಂಟಿತನ ಹಾಗೂ ಏಕಾಂತ ಜೀವನದಿಂದಾಗಿ ಕೀಳರಿಮೆಯಿಂದ ಬಳಲುವ ಸನ್ನಿವೇಶಗಳು ಎದುರಾಗಲಿವೆ ಎಂದು ಹೇಳಿದರು.

ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹ ಪ್ರಯುಕ್ತ ಮಲ್ಪೆ ಬೀಚಿನಲ್ಲಿ ಮರಳು ಶಿಲ್ಪ ರಚನೆ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಕೆಲ ದಿನಗಳ ಹಿಂದೆ ಹಮ್ಮಿಕೊಳ್ಳಲಾಗಿತ್ತು.ಇಂದು ವ್ಯಂಗ್ಯ ಚಿತ್ರ ಪ್ರದರ್ಶನದ ಮೂಲಕ ಪೋಷಕರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಐವತ್ತಕ್ಕೂ ಹೆಚ್ಚು ವ್ಯಂಗ್ಯಚಿತ್ರಕಾರರು ರಚಿಸಿದ ವ್ಯಂಗ್ಯ ಚಿತ್ರಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ,ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸ್ ವಾಝ್, ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ,ನಾಗರಾಜ್ ಟಿ.ಪಿ, ದಿವ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

19/02/2021 07:05 pm

Cinque Terre

12.07 K

Cinque Terre

1

ಸಂಬಂಧಿತ ಸುದ್ದಿ