ಮುಲ್ಕಿ: ಜನಸೇವಾ ಪರಿಷತ್ ಕೊಲಕಾಡಿ, ಅತಿಕಾರಿಬೆಟ್ಟು ವತಿಯಿಂದ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮದ ಉದ್ಘಾಟನೆ ಕೊಲಕಾಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ನಡೆಯಿತು.
ಸಮಾರಂಭವನ್ನು ವೈದ್ಯರಾದ ಡಾ. ರವೀಂದ್ರ ಪ್ರಭು ಮೈಲೊಟ್ಟು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯುವಕರನ್ನು ಒಂದುಗೂಡಿಸಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಜನಸೇವಾ ಪರಿಷತ್ ಕಾರ್ಯವೈಖರಿ ಶ್ಲಾಘನೀಯ. ಸಂಘಟನೆಗಳು ನಾಗರಿಕರಿಗೆ ತಿಳಿವಳಿಕೆ ಮೂಲಕ ಮನಸ್ಸಿನೊಳಗಿನ ಕತ್ತಲೆ ದೂರ ಮಾಡಲು ಪ್ರಯತ್ನಿಸುತ್ತಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆಯನ್ನು ಕೊಲಕಾಡಿ ಜನಸೇವಾ ಪರಿಷತ್ ಅಧ್ಯಕ್ಷ ಅನಿಲ್ ಕೊಲಕಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಂತವೈದ್ಯ ಡಾ. ಚಂದ್ರಶೇಖರ್ ಬಲೆಪು, ಕೊಲಕಾಡಿ ಸಾಯಿ ಮಂದಿರದ ಶ್ರೀಧರ ಕೋಟ್ಯಾನ್, ಅತಿಕಾರಿಬೆಟ್ಟು ಗ್ರಾಪಂ ಸದಸ್ಯ ಮನೋಹರ ಕೋಟ್ಯಾನ್, ಸಂಘಟನೆ ಉಪಾಧ್ಯಕ್ಷ ಶ್ರೀಕಾಂತ್ ಭಟ್, ಗೌರವ ಸಲಹೆಗಾರರಾದ ಅಚ್ಚುತ ಆಚಾರ್ಯ, ಶ್ರೀಪತಿ ಭಟ್ ಪರಂಕಿಲ, ಗೌರವಾಧ್ಯಕ್ಷ ಗಂಗಾಧರ್ ಶೆಟ್ಟಿ ಬರ್ಕೆ ತೋಟ, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಶರತ್ ಕುಮಾರ್ ಸ್ವಾಗತಿಸಿದರು ಶ್ರೀಕಾಂತ ಆಚಾರ್ಯ ಉಪ್ಪಿಕಲ ವಂದಿಸಿದರು. ಪ್ರಶಾಂತ ಆಚಾರ್ಯ ನಿರೂಪಿಸಿದರು. ಬಳಿಕ ಆಯುಷ್ಮಾನ್ ಆರೋಗ್ಯ ಕಾರ್ಡ್ ಉಚಿತ ನೋಂದಣಿ ನಡೆಯಿತು.
Kshetra Samachara
31/01/2021 10:33 am