ಹೆಬ್ರಿ: ಯೋಗ ಆರೋಗ್ಯ ಸಂರಕ್ಷಣೆ ಮತ್ತು ಕೊರೊನಾ ಜಾಗೃತಿ ಕುರಿತು ಹೆಬ್ರಿಯಲ್ಲಿ ಸೈಕಲ್ ಜಾಥಾ ನಡೆಯಿತು.
ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಹೆಬ್ರಿ ಮತ್ತು ಹೆಬ್ಬೇರಿ ಬೈಸಿಕಲ್ ಆರ್ಗನೈಸೇಶನ್ ಆಫ್ ಇಂಡಿಯಾ ಸಂಸ್ಥೆಗಳ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಸ್ವಸ್ಥ ಸಮಾಜದಿಂದ ಬಲಿಷ್ಠ ಭಾರತ ನಿರ್ಮಾಣದ ಹೊಣೆ ಹೊತ್ತ ಹೆಬ್ರಾಯ ಸಂಸ್ಥೆಯಿಂದ ಸೈಕಲ್ ಜಾಥಾ ನಡೆಯಿತು.
ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಬ್ರಿ ತಹಸೀಲ್ದಾರ್ ಪುರಂದರ ಅವರು ಫ್ಲ್ಯಾಗ್ ಬೀಸುವ ಮೂಲಕ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಸೀತಾನದಿ ಸೌಖ್ಯ ಯೋಗ ಟ್ರಸ್ಟಿನ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಗಣಪತಿ ಎಚ್. ಎ., ದಿನಕರ ಪ್ರಭು, ಡಾ. ರಾಮಚಂದ್ರ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/01/2021 08:11 pm