ವರದಿ: ರಹೀಂ ಉಜಿರೆ
ಉಡುಪಿ: ಕೋವಿಡ್ ಹಿನ್ನೆಲೆಯಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಪರ್ಯಾಯ ಮಹೋತ್ಸವವನ್ನು ಸ್ವಾಮೀಜಿಯ ಸೂಚನೆಯಂತೆ ಸರಳ ಹಾಗೂ ಸಂಪ್ರದಾಯಿಕವಾಗಿ ನಡೆಸಲು ಪರ್ಯಾಯ ಮಹೋತ್ಸವ ಸಮಿತಿ ಸಿದ್ಧತೆ ನಡೆಸಿದೆ.
ಪರ್ಯಾಯ ಮೆರವಣಿಗೆ ಸಾಗುವ ರಸ್ತೆಯುದಕ್ಕೂ ದೀಪಾಲಂಕಾರಗಳನ್ನು ಮಾಡಲಾಗಿದ್ದು, ಬಂಟಿಂಗ್ಸ್ ಸೇರಿದಂತೆ ಬಗೆಬಗೆಯ ಅಲಂಕಾರದಿಂದ ನಗರ ಕಂಗೋಳಿಸುತ್ತಿದೆ. ಶ್ರೀಕೃಷ್ಣ ಮಠ, ರಥಬೀದಿ ಅಲಂಕಾರದಿಂದ ನಗರದ ಸೌಂರ್ದಯ ಇನ್ನಷ್ಟು ಹೆಚ್ಚಾಗಿದೆ.
ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ನಾನಾ ಕಡೆಗಳಿಂದ ಭಕ್ತರು ಮಠದತ್ತ ಆಗಮಿಸುತ್ತಿದ್ದಾರೆ.ರಾತ್ರಿ ಹೊತ್ತು ಉತ್ಸವ ಇನ್ನಷ್ಟು ಕಳೆಗಟ್ಡಲಿದೆ. ಮಧ್ಯರಾತ್ರಿ ಕಾಪು ಸಮೀಪದ ದಂಡತೀರ್ಥದಲ್ಲಿ ತೀರ್ಥಸ್ನಾನ ಮಾಡಲಿರುವ ಭಾವೀ ಪರ್ಯಾಯ ಶ್ರೀಗಳು ಬಳಿಕ ಜೋಡುಕಟ್ಟೆಯಲ್ಲಿ ಪರ್ಯಾಯ ಮೆರವಣಿಗೆ ಮೂಲಕ ಮಠಕ್ಕೆ ಆಗಮಿಸಲಿದ್ದಾರೆ.ಮಠದಲ್ಲಿ ದೇವರ ದರ್ಶನ ,ಅರಳು ಗದ್ದುಗೆ ,ಸಟ್ಡುಗ ಹಸ್ತಾಂತರ ,ಸರ್ವಜ್ಞ ಪೀಠಾರೋಹಣ ಬಳಿಕ ಪರ್ಯಾಯ ದರ್ಬಾರ್ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.ದರ್ಬಾರ್ ನಲ್ಲಿ ಅಷ್ಟಮಠಾಧೀಶರ ಸಮ್ಮುಖ ನಾಡಿನ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಇದೆ.ಬಳಿಕ ಭಕ್ತರಿಗೆ ಶ್ರೀಕೃಷ್ಣನ ಅನ್ನಪ್ರಸಾದ ವಿತರಣೆ ನಡೆಯಲಿದೆ.
PublicNext
17/01/2022 05:59 pm