ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಸ್ವಸ್ಥ ಯುವಕ ಗುಣಮುಖನಾಗಿ ಹುಟ್ಟೂರು ಜಾರ್ಖಂಡ್‌ಗೆ ವಾಪಸ್

ಉಡುಪಿ: ನಗರದಲ್ಲಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಉಡುಪಿ ನಗರ ಪೋಲಿಸ್ ಠಾಣೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಳೆದ ವಾರ ವಶಕ್ಕೆ ಪಡೆದು, ಡಾ. ಎ.ವಿ ಬಾಳಿಗ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದರು. ಇದೀಗ ಯುವಕ ಗುಣಮುಖನಾಗಿದ್ದಾನೆ. ಈತನನ್ನು ರೈಲಿನ ಮೂಲಕ ಜಾರ್ಖಂಡಿಗೆ ಕಳಿಸಲಾಯಿತು. ದೊಡ್ಡಣಗುಡ್ಡೆಯ ಡಾ.ಎ.ವಿ ಬಾಳಿಗಾ ಆಸ್ಪತ್ರೆಯು ಈ ಯುವಕನಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಈ ಯುವಕನ ಹೆಸರು ಮೋಹನ್. ಮಾನಸಿಕ ಅಸ್ವಸ್ಥಗೊಂಡು ಉಡುಪಿಗೆ ಆಗಮಿಸಿ ಆತಂಕ ಸೃಷ್ಟಿಸಿದ್ದ. ಈತನನ್ನು ಚಿಕಿತ್ಸೆಗೆ ಒಳಪಡಿಸಲಾಯಿತು. ಗುಣಮುಖನಾದ ತಕ್ಷಣ ಜಾರ್ಖಂಡಿನ ತನ್ನ ಮನೆಯ ವಿಳಾಸ ಹೇಳಿದ್ದ. ಹೀಗಾಗಿ ಹೆತ್ತವರನ್ನು ಸಂಪರ್ಕಿಸಲು ಅನುಕೂಲವಾಯಿತು. ಹೆತ್ತವರ ಕೋರಿಕೆಯಂತೆ, ರೈಲಿನ ಮುಖಾಂತರ ಯುವಕನನ್ನು ಇದೀಗ ಊರಿಗೆ ರವಾನಿಸಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಠಾಣೆಯ ಸಿಬ್ಬಂದಿ, ಸಮಾಜಸೇವಕ ನಿತ್ಯಾನಂದ ಒಳಕಾಡು ಭಾಗಿಯಾಗಿದ್ದರು. ರೈಲ್ವೆ ಪೋಲಿಸರು ಸಹಕರಿಸಿದರು.

Edited By :
PublicNext

PublicNext

25/06/2022 10:40 am

Cinque Terre

52.86 K

Cinque Terre

0

ಸಂಬಂಧಿತ ಸುದ್ದಿ