ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೊರೋನಾ ವೀಕೆಂಡ್ ಕರ್ಫ್ಯೂ ಭಾನುವಾರ ಯಶಸ್ವಿಯಾಗಿದ್ದು ಮುಲ್ಕಿ ಸ್ತಬ್ದಗೊಂಡಿದೆ.
ಭಾನುವಾರದ ರಜಾ ಮೂಡ್ ನಲ್ಲಿದ್ದ ಜನ ಪೇಟೆಗೆ ಬಾರದೆ ರಸ್ತೆಗಳು ಬಿಕೋ ಎನ್ನುತ್ತಿತ್ತು.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು ಉಡುಪಿ ತಡೆರಹಿತ ಬಸ್ಸುಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಸಂಚರಿಸುತ್ತಿತ್ತು.
ಕಟೀಲು ಮೂಡಬಿದ್ರೆ ಕಿನ್ನಿಗೋಳಿ ಬಸ್ಸು ಸಂಚಾರ ಪ್ರಯಾಣಿಕರಿಲ್ಲದೆ ಮೊಟಕುಗೊಂಡಿದೆ.ಮುಲ್ಕಿ ಪರಿಸರದ ಪಡುಪಣಂಬೂರು ಹಾಗೂ ಕಾರ್ನಾಡು ಹರಿಹರ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಸರಳವಾಗಿ ನಡೆದಿದೆ.
ಕಾರ್ನಾಡ್ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರಿಲ್ಲದೇ ವ್ಯಾಪಾರ-ವಹಿವಾಟು ಸಪ್ಪೆಯಾಗಿತ್ತು.
ಉಳಿದಂತೆ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಅತಿಕಾರಿಬೆಟ್ಟು, ಪಕ್ಷಿಕೆರೆ ಪಡುಪಣಂಬೂರು ಹಳೆಯಂಗಡಿ ಪರಿಸರದಲ್ಲಿ ಭಾನುವಾರದ ರಜಾದೊಡನೆ ಕರ್ಫ್ಯೂ ಯಶಸ್ವಿಯಾಗಿದೆ.
Kshetra Samachara
16/01/2022 07:34 pm