ಉಡುಪಿ: ವಾರಾಂತ್ಯ ಕರ್ಪ್ಯೂ ಮೊದಲ ದಿನವಾದ ಇಂದು ಕೃಷ್ಣನಗರಿಯಲ್ಲಿ ವಾಹನಗಳು ಮತ್ತು ಜನರಿಲ್ಲದೆ ಬಿಕೋ ಎನ್ನುತ್ತಿತ್ತು.ಉಡುಪಿಯ ಸಿಟಿ ಬಸ್ ಮತ್ತು ಸರ್ವಿಸ್ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳು ಖಾಲಿಯಾಗಿ ನಿಂತಿದ್ದ ದೃಶ್ಯ ಕಂಡುಬಂತು.ಅಗತ್ಯ ಸೇವೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.ನಗರ ಮತ್ತು ಹೊರಭಾಗದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರಾದರೂ ಇಂದು ಅಷ್ಟೊಂದು ಬಿಗಿ ನಿಯಮ ಇದ್ದಂತೆ ಕಾಣಲಿಲ್ಲ.ಶಾಲೆ ಕಾಲೇಜುಗಳಿಗೆ ರಜೆಯಾದ ಕಾರಣ ನಗರದಲ್ಲಿ ಜನಸಂಚಾರ ಕಡಿಮೆ ಇತ್ತು.ಉಳಿದಂತೆ ಅಗತ್ಯ ಸೇವೆಯಲ್ಲಿ ತೊಡಗಿದ ಜನ ಎಂದಿನಂತೆ ಅತ್ತಿಂದಿತ್ತ ಸಂಚಾರ ಮಾಡುತ್ತಿದ್ದಾರೆ.
Kshetra Samachara
08/01/2022 11:21 am