ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪ್ರವಾಸಿಗರ ಖುಷಿ ಕಸಿದ ʼಒಮಿಕ್ರಾನ್‌ʼ; ಬೀಚ್‌ ಸಂಭ್ರಮಾಚರಣೆಗೆ ಅಂಕುಶ

ಕಾಪು: ಕಾಪು ಬೀಚ್ ಗೆ ಇಂದು ಹೊಸ ವರ್ಷ ಸಂಭ್ರಮಾಚರಣೆಗೆ ಬಂದವರಿಗೆ ನಿರಾಸೆಯೇ ಆಯಿತು.ಮಂಗಳೂರು, ಉಡುಪಿ, ಬೆಂಗಳೂರು ಮೊದಲಾದ ಕಡೆಗಳಿಂದ ಬಂದಿದ್ದ ಪ್ರವಾಸಿಗರು ʼಒಮಿಕ್ರಾನ್ʼ ನೈಟ್ ಕರ್ಫ್ಯೂ ವಿನಿಂದಾಗಿ ಇಳಿಸಂಜೆ ಹೊತ್ತು 7 ಗಂಟೆಯೊಳಗೆ ನಿರ್ಗಮಿಸುವ ಅನಿವಾರ್ಯತೆಗೆ ಸಿಲುಕಿ ಸಪ್ಪೆ ಮೋರೆಯಿಂದಲೇ ಹಿಂತಿರುಗಬೇಕಾಯಿತು.

ಒಮಿಕ್ರಾನ್ ಭೀತಿಯಿಂದಾಗಿ ಬೀಚ್‌ ವರ್ಷಾಚರಣೆಗೆ ಜಿಲ್ಲಾಡಳಿತ ಬ್ರೇಕ್ ನೀಡಿದ್ದು, ಕಾಪು ಬೀಚ್ ಗೆ ಆಗಮಿಸಿದ ಪ್ರವಾಸಿಗರು ಮತ್ತು ಸ್ಥಳೀಯರನ್ನು ಪೊಲೀಸರು, ಬೀಚ್ ನಿರ್ವಹಣೆ ಸಮಿತಿ ಸಿಬಂದಿ ವಾಪಸ್ ಕಳುಹಿಸಿದರು.

ಹೊರಗಿನಿಂದ ಬಂದ ವಿದ್ಯಾರ್ಥಿಗಳ ಸಹಿತ ಪ್ರವಾಸಿಗರು ಲೇಟ್ ನೈಟ್ ಎಂಜಾಯ್ ಮೆಂಟ್ ಗೆ ಅವಕಾಶ ಸಿಗದೆ ವಾಪಸಾಗಿದ್ದು, ಸ್ಥಳೀಯ ಅಂಗಡಿಯವರೂ ಬೇಗನೆ ಅಂಗಡಿ ಮುಚ್ಚಿ ಮನೆಗೆ ತೆರಳಿದರು.

Edited By : Manjunath H D
Kshetra Samachara

Kshetra Samachara

01/01/2022 09:53 am

Cinque Terre

6.21 K

Cinque Terre

0

ಸಂಬಂಧಿತ ಸುದ್ದಿ