ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ತಾಲೂಕಿನಲ್ಲಿ ವೀಕೆಂಡ್ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ

ಕಾಪು : ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಘೋಷಿಸಿರುವ ವೀಕೆಂಡ್ ಕರ್ಪ್ಯೂ ಗೆ ಕಾಪುವಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಿನಸಿ, ತರಕಾರಿ ಮತ್ತು ಅವಶ್ಯಕ ಸಾಮಾಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ತೆರೆಯಲು ಅವಕಾಶ ನಿರಾಕರಿಸಲಾಗಿದೆಯಾದರೂ ಕೆಲವೆಡೆಗಳಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿವೆ. ವಾಹನ ಸಂಚಾರ ಕೂಡಾ ಎಂದಿನಂತೆ ಕಂಡುಬಂದಿದ್ದು ಜನಸಂಚಾರ ಮುಂದುವರೆದಿದೆ.

ಕಾಪು ಪೇಟೆಯಲ್ಲಿ ಅವಶ್ಯಕ ಸಾಮಾಗ್ರಿಗಳ ಅಂಗಡಿಗಳನ್ನು ಹೊರತು ಪಡಿಸಿ, ಹೆಚ್ಚಿನ ಅಂಗಡಿಗಳು ಮುಚ್ಚಲ್ಪಟ್ಟಿದ್ದರೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತಿವೆ.

ಕಾಪು ಪೊಲೀಸರು ಅಲ್ಲಲ್ಲಿ ವಾಹನ ತಪಾಸಣೆ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದು, ಮಧ್ಯಾಹ್ನದ ಬಳಿಕ ವೀಕೆಂಡ್ ಕರ್ಫ್ಯೂಗೆ ಪೂರ್ಣ ಬೆಂಬಲ ವ್ಯಕ್ತವಾಗುವ ಸಾಧ್ಯತೆಗಳಿವೆ.

Edited By : Shivu K
Kshetra Samachara

Kshetra Samachara

04/09/2021 01:33 pm

Cinque Terre

11.47 K

Cinque Terre

0

ಸಂಬಂಧಿತ ಸುದ್ದಿ