ಮುಲ್ಕಿ:ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ವೀಕೆಂಡ್ ಕರ್ಫ್ಯೂ ಗೊಂದಲಗಳ ನಡುವೆ ಯಶಸ್ವಿಯಾಗಿದೆ.ಸರಕಾರ ವೀಕೆಂಡ್ ಕರ್ಫ್ಯೂ ಘೋಷಿಸಿದ್ದರೂ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕು ವ್ಯಾಪ್ತಿಯಲ್ಲಿ ನಿರ್ದಿಷ್ಟ ದಿನಸಿ , ತರಕಾರಿ ಹಾಗೂ ಮೆಡಿಕಲ್ ಅಂಗಡಿಗಳಿಗೆ ವ್ಯಾಪಾರ ನಡೆಸಲು ಅವಕಾಶವಿತ್ತು. ಆದರೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಬಟ್ಟೆ ಮೊಬೈಲ್ ಸಹಿತ ಎಲ್ಲಾ ಅಂಗಡಿಗಳು ತೆರೆದಿದ್ದು ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.
ಈ ಸಂದರ್ಭ 11 ಗಂಟೆ ವೇಳೆಗೆ ಮುಲ್ಕಿ ನ. ಪಂ. ಮುಖ್ಯಾಧಿಕಾರಿ ಚಂದ್ರಪೂಜಾರಿ ಮುಲ್ಕಿ ಠಾಣಾ ಇನ್ಸ್ಪೆಕ್ಟರ್ ಕುಸುಮಾಧರ ನೇತೃತ್ವದಲ್ಲಿ ಅಂಗಡಿ ಮಾಲೀಕರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿ ಮುಚ್ಚಿಸಲಾಯಿತು.
ಮುಲ್ಕಿ ಕಿನ್ನಿಗೋಳಿ ಹಳೆಯಂಗಡಿ ಪಕ್ಷಿಕೆರೆ ಪರಿಸರದಲ್ಲಿ ಮಧ್ಯಾಹ್ನ 2 ಗಂಟೆ ಬಳಿಕ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆರಹಿತ ಬಸ್ಸು ಸಂಚಾರ ಮಾಮೂಲಿಯಾಗಿತ್ತು ಹಾಗೂ ಅನ್ಯ ಜಿಲ್ಲೆಗಳಿಗೆ ಸರಕಾರಿ ಬಸ್ ಸಂಚಾರ ಹಾಗೂ ಇತರೆ ವಾಹನಗಳ ಓಡಾಟ ಭರ್ಜರಿಯಾಗಿತ್ತು ಕೊರೊನಾ ವೀಕೆಂಡ್ ಕರ್ಫ್ಯೂ ಕೇವಲ ಬಡ ಅಂಗಡಿ ಮಾಲೀಕರಿಗೆ ಎಂದು ಹೆಸರು ಹೇಳಲಿಚ್ಛಿಸದ ಅಂಗಡಿ ಮಾಲೀಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಮುಲ್ಕಿ ತಾಲೂಕಿನ ಮೂಲ್ಕಿ ನ ಪಂ ವ್ಯಾಪ್ತಿಯ ಚಿತ್ರಾಪುನಲ್ಲಿ 1, ಪಡುಪಣಂಬೂರು 10 ನೇ ತೋಕೂರುನಲ್ಲಿ 1, ಬೆಳ್ಳಾಯರುನಲ್ಲಿ 1,ಹಳೆಯಂಗಡಿ ಪಂಚಾಯತ್ 1,ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊಂಡೆಮೂಲದಲ್ಲಿ 1,ಮೆನ್ನಬೆಟ್ಟು ನಲ್ಲಿ 3 ಸೇರಿದಂತೆ ಒಟ್ಟು 8 ಪೊಸಿಟಿವ್ ಪ್ರಕರಣ ದಾಖಲಾಗಿದೆ.
Kshetra Samachara
07/08/2021 07:13 pm