ಮಂಗಳೂರು: ಖಾಸಗಿ ಬಸ್ಸಿನಿಂದ ಎಸೆಯಲ್ಪಟ್ಟು ಮೆದುಳು ನಿಷ್ಕ್ರಿಯಗೊಂಡಿದ್ದ ವಿದ್ಯಾರ್ಥಿಯ ಅಂಗಾಂಗ ದಾನ ಮಾಡಿ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಮಂಗಳೂರಿನ ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಯಶ್ ರಾಜ್ ಎಂಬಾತ ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಯಾಗಿದ್ದ. ಸೆಪ್ಟೆಂಬರ್ 7ರಂದು ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಆಡಂ ಕುದ್ರು ಎಂಬಲ್ಲಿ ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯವಾಗಿತ್ತು.
ಹೀಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಅಂಗಾಂಗ ದಾನ ಮಾಡಲು ನಿರ್ಧರಿಸಲಾಗಿದ್ದು, ಗ್ರೀನ್ ಕಾರಿಡಾರ್ ಮೂಲಕ ಮಂಗಳೂರು ಏರ್ಪೋರ್ಟ್ ಗೆ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಅಂಗಾಂಗ ಜೋಡಣೆ
ಮಾಡಲು ಅಂಗಾಂಗ ರವಾನೆ ಮಾಡಲಾಯ್ತು.
ಇನ್ನು ಖಾಸಗಿ ಬಸ್ಸುಗಳ ನಿರ್ಲಕ್ಷ್ಯ ಮತ್ತು ಅತೀ ವೇಗದಿಂದ ಯಶ್ ರಾಜ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದ್ದು ಪುಟ್ ಬೋರ್ಡ್ ನಲ್ಲಿ ಪ್ರಯಾಣಿಕರ ತುಂಬಿಸಿ ವೇಗವಾಗಿ ಸಾಗುವ ಬಸ್ಸುಗಳ ಬಗ್ಗೆ ದ.ಕ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದಾರೆ.
PublicNext
14/09/2022 08:40 pm