ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: 3-ಡಿ ಸೊಳ್ಳೆ ಕಲಾಕೃತಿ: ಕಲಾವಿದರಿಂದ ಜನ ಜಾಗೃತಿ

ಮಣಿಪಾಲ: ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ, ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೆಬೆಟ್ಟು ಇವರು, ಮಾಹೆಯ ಇಂಟರಾಕ್ಟ್ ಆವರಣದಲ್ಲಿ ಡೆಂಘೀ, ಮಲೇರಿಯಾ ಇನ್ನಿತರ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಬೃಹತ್ ಗಾತ್ರದ ಸೊಳ್ಳೆಯ ಕಲಾಕೃತಿಯನ್ನು ರಚಿಸಿದ್ದಾರೆ.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಕಲಾಕೃತಿಯನ್ನು ಅನಾವರಣಗೊಳಿಸಿ ಮಾತನಾಡಿ, ಸೊಳ್ಳೆಯು ಮಾನವ ಕುಲಕ್ಕೆ ಅತೀ ಅಪಾಯಕಾರಿಯಾಗಿದ್ದು, ಇವುಗಳು ಹರಡುವ ರೋಗಗಳಿಂದ ವಿಶ್ವದಾದ್ಯಂತ ಪ್ರತಿವರ್ಷ ಲಕ್ಷಾಂತರ ಜನರು ಬಲಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸೊಳ್ಳೆಗಳು ಮಳೆಗಾಲದಲ್ಲಿ ಹರಡುವ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ 3-ಡಿ ಕಲಾಕೃತಿಯನ್ನು ರಚಿಸಲಾಗಿದೆ ಎಂದು ಕಲಾವಿದರು ತಿಳಿಸಿದರು.ಈ ಆಕರ್ಷಕ 3- ಡಿ ಕಲಾಕೃತಿಯು ಮಣಿಪಾಲ ವಿದ್ಯಾಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಮಣಿಪಾಲ - ಉಡುಪಿ ಜನರ ಗಮನ ಸೆಳೆಯಿತು.

Edited By : Manjunath H D
PublicNext

PublicNext

23/08/2022 04:36 pm

Cinque Terre

36.57 K

Cinque Terre

0

ಸಂಬಂಧಿತ ಸುದ್ದಿ