ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ನಾನಾ ಖಾಯಿಲೆಗಳಿಗೆ ನಾಟಿ ಮದ್ದು ನೀಡುವ ಅಪರೂಪದ ವೈದ್ಯೆ

ಮೂಡುಬಿದಿರೆ: ಪ್ರಸ್ತುತ ದಿನಗಳಲ್ಲಿ ಸಣ್ಣ ಖಾಯಿಲೆಗೂ ಆಸ್ಪತ್ರೆಯೇ ಆಸರೆಯನ್ನುವ ಈ ದಿನಗಳಲ್ಲಿ ಹಳ್ಳಿ ಮದ್ದುಗಳು ಅತೀ ವಿರಳ. ಅಂತಹದ್ರಲ್ಲಿ ಇಲ್ಲೊಬ್ಬರು ನಾಟಿ ವೈದ್ಯರು ಸದ್ದಿಲ್ಲದೆ ತನ್ನನ್ನು ಅರಸಿಕೊಂಡು ಬಂದಿರುವ ರೋಗಿಗಳನ್ನು ಗುಣಪಡಿಸುವ ಕಾರ್ಯ ಮಾಡ್ತಿದ್ದಾರೆ. ಅಂದಹಾಗೆ, ಇವರು ಇರುವೈಲು ಕೆಂಪುಗುಡ್ಡೆಯ ನಿವಾಸಿ. ಅಂದಹಾಗೇ ಇವ್ರಿಗೆ ಈ ವಿದ್ಯೆ ಇವ್ರ ಅತ್ತೆಯಿಂದ ಬಳುವಳಿಯಾಗಿ ಬಂದಿದೆ. ಮೊದಲು ಇವರ ಅತ್ತೆ ಭಾಗಿ ಪೂಜಾರಿಯವರು ಗುಡ್ಡಗಳಿಂದ ಎಲೆ ಔಷಧಿಯ ಮೂಲಿಕೆಗಳನ್ನು ತಂದು ನಾಟಿ ಔಷಧಿಯನ್ನು ಮಾಡುತ್ತಿದ್ದರು. ನಂತರ ಔಷಧಿ ನೀಡುವ ಪರಂಪರೆ ಇಲ್ಲಿಗೆ ಅಳಿಯಬಾರದೆಂಬ ಉದ್ದೇಶದಿಂದ ಅತ್ತೆಯವರಿಂದ ಔಷಧಿಯ ವಿದ್ಯೆಗಳನ್ನು ಕಲಿತು ನಂತರ ಇವರು ನಾಟಿ ಔಷಧಿಗಳನ್ನು ನೀಡಲು ಆರಂಭಿಸಿದರು.

ಕೆಮ್ಮು, ಶೀತ, ಕಫ, ಜ್ವರ ಹಾಗೂ ಉಬ್ಬಸ ಸೇರಿದಂತೆ ಇನ್ನಿತರ ಖಾಯಿಲೆಗಳಿಗೆ ಇವರು ನಾಟಿ ಮದ್ದನ್ನು ನೀಡುತ್ತಾ ಬಂದಿದ್ದಾರೆ. ಹತ್ತಿರದ ಊರಿಂದ ಮಾತ್ರವಲ್ಲದೇ ದೂರದ ಊರುಗಳಿಂದಲೂ ಔಷಧಿಯನ್ನು ತೆಗೆದುಕೊಂಡು ಹೋಗಲು ಜನರು ಬರುತ್ತಾರೆ. ಆಸ್ಪತ್ರೆಗೆ ಸಾವಿರಾರು ರೂ ಖರ್ಚು ಮಾಡಿ ಗುಣವಾಗದೇ ನಂತರ ಇಲ್ಲಿ ಬಂದು ಗುಣಮುಖರಾಗಿ ಹೋದ ಅದೆಷ್ಟೋ ಉದಾಹರಣೆಗಳಿವೆ.

ಪ್ರತಿ ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಔಷಧಿಯನ್ನು ಪಡೆದುಕೊಂಡು ಹೋಗುತ್ತಾರೆ. ಗಿಡಮೂಲಿಕೆ ಔಷಧಿಯಿಂದ ಜನರ ಖಾಯಿಲೆಗಳು ದೂರವಾಗಲು ಮೂಲ ಕಾರಣ ಮಂತ್ರದೇವತೆ ದೈವ ಎಂಬುದು ಇವರ ನಂಬಿಕೆ. ಕಾಡುಗಳಿಂದ ಹುಡುಕಿ ತಂದ ಗಿಡಮೂಲಿಕೆಗಳಿಂದ ಔಷಧಿಯನ್ನು ತಯಾರಿಸಿ ಮಂತ್ರದೇವತೆ ದೈವದ ಎದುರಲ್ಲಿ ತಯಾರಿಸಿದ ಔಷಧಿಯನ್ನು ಇಟ್ಟು ದೈವಕ್ಕೆ ಕೋಳಿ ಅಥವಾ ಹೂ, ಹಣ ನೀಡುವುದಾಗಿ ಹರಕೆ ಹೊತ್ತು ಔಷಧಿಯನ್ನು ಬಂದ ರೋಗಿಗಳಿಗೆ ನೀಡುತ್ತಾರೆ. ಆದರೆ ಇದೀಗ ಕೋಳಿಯನ್ನು ಕೊಡುವುದನ್ನು ನಿಲ್ಲಿಸಿದ ನಂತರ ಜನರಿಂದ ಹೂ ಅಥವಾ ದೈವಕ್ಕೆ ನೀಡುವ ಕೋಳಿಯ ಹಣವನ್ನು ಸಂಗ್ರಹಿಸಿ ದೈವದ ಆರಾಧನೆಗಾಗಿ ವಿನಿಯೋಗಿಸಿಕೊಳ್ಳುತ್ತಾರೆ. ಇವ್ರ ಸೇವೆಯನ್ನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಇವರಿಗೆ ಸನ್ಮಾನಿಸಿ ಗೌರವಿಸಿವೆ. ದೂರದ ಊರಿಂದ ಯಾರೇ ಜನ ಬರುವುದಾದರೂ ಇವರ ಮಗನಿಗೆ ಕರೆ ಮಾಡಿ ಮುಂಚಿತವಾಗಿ ತಿಳಿಸುತ್ತಾರೆ. ಅದರಂತೆ ಈ ನಾಟಿ ವೈದ್ಯೆ ಔಷಧಿಯನ್ನು ತಯಾರಿಸಿಡುತ್ತಾರೆ. ನಿತ್ಯವೂ ಔಷಧಿಗಾಗಿ ಜನ ಬರುತ್ತಿದ್ದು ಭಾನುವಾರದಂದು ಹೆಚ್ಚು ಜನ ಬರುತ್ತಾರೆ.

Edited By : Manjunath H D
Kshetra Samachara

Kshetra Samachara

11/04/2022 06:26 pm

Cinque Terre

15.05 K

Cinque Terre

2

ಸಂಬಂಧಿತ ಸುದ್ದಿ