ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೇಶ ಸುತ್ತಿ ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಕಿರಣ್ ವರ್ಮಾ!

ಉಡುಪಿ: ಪತಿಗೆ ರಕ್ತ ಕೊಡಿಸಲು ಆರ್ಥಿಕ ಸಂಕಷ್ಟ ಎದುರಿಸಿದ ಮಹಿಳೆಯ ಕಷ್ಟ ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ದೇಶ ಸುತ್ತಿ ಅರಿವು ಮೂಡಿಸಲು ಹೊರಟಿದ್ದಾರೆ. ದೆಹಲಿಯ ನಿವಾಸಿ ಕಿರಣ್ ವರ್ಮಾ ದೇಶಾದ್ಯಂತ ಅರಿವು ಮೂಡಿಸಲು ಹೊರಟ‌ ಸಾಮಾಜಿಕ ಕಾರ್ಯಕರ್ತ.ಇವರು ಕಳೆದ ವರ್ಷ ಡಿಸೆಂಬರ್‌ 28 ರಂದು ಟ್ರಿವೆಂಡ್ರಂ ನಿಂದ ನಡೆದಾಡಲು ಆರಂಭಿಸಿ ಸುಮಾರು 750 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ‌.

ಎಲ್ಲ ಜಿಲ್ಲೆಗಳಲ್ಲಿ ಬ್ಲಡ್ ಡೊನೇಟ್ ಕ್ಯಾಂಪ್ ನಡೆಸುವ ಸಂಸ್ಥೆಯನ್ನ ಸಂಪರ್ಕಿಸಿ ರಕ್ತದಾನ ಶಿಬಿರ ಕೂಡ ನಡೆಸಿದ್ದಾರೆ. ಹೀಗೆ ಹೋದಲ್ಲೆಲ್ಲ ರಕ್ತದಾನ ಅರಿವು ಮೂಡಿಸಿ ಪ್ರತೀ‌ ಜಿಲ್ಲೆಯಲ್ಲಿ ರಕ್ತ ಸಂಗ್ರಹ ಹೆಚ್ಚು ಮಾಡುವುದರ ಮೂಲಕ ರಕ್ತದ ಲಭ್ಯತೆ ಆಗಬೇಕೆನ್ನುವ ಉದ್ದೇಶ ಕಿರಣ್ ವರ್ಮಾರದ್ದು. ರಕ್ತದ ಕೊರತೆ ಯಾರಿಗೂ ಆಗಬಾರದು ಎಂಬ ಸದುದ್ದೇಶದಿಂದ ಆರಂಭಿಸಿದ ಪಾದಯಾತ್ರೆ 750 ಕಿಲೋಮೀಟರ್ ಪೂರೈಸಿ ಉಡುಪಿ ತಲುಪಿದ್ದಾರೆ ಕಿರಣ್.

ಮುಂದಿನ ಎರಡು ವರ್ಷಗಳಲ್ಲಿ 20 ಸಾವಿರ ಕಿಲೋಮೀಟರ್ ಪಾದಯಾತ್ರೆ ನಡೆಸುವ ಗುರಿಯನ್ನ ಹೊಂದಿದ್ದಾರೆ. ಜೂನ್ 14, 2024 ರಂದು ವಿಶ್ವ ರಕ್ತದಾನಿಗಳ ದಿನದಂದು ತನ್ನ ರಕ್ತದಾನ ಅರಿವು ಪಾದಯಾತ್ರೆ ಮುಗಿಸಲಿದ್ದೇನೆ. ತನ್ನ ಜೀವಕ್ಕೆ ತೊಂದರೆ ಆದ್ರೂ ಚಿಂತೆಯಿಲ್ಲ‌.ಜನರು ರಕ್ತದ ಕೊರತೆಯಿಂದ ಪರದಾಡಬಾರದು ಅನ್ನುವ ಆಕಾಂಕ್ಷೆ ಕಿರಣ್ ವರ್ಮಾರದ್ದು‌‌.

Edited By : Manjunath H D
PublicNext

PublicNext

29/01/2022 08:14 am

Cinque Terre

40.98 K

Cinque Terre

0

ಸಂಬಂಧಿತ ಸುದ್ದಿ