ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪದ್ಮಶ್ರೀ ಹರೇಕಳ ಹಾಜಬ್ಬ ಸ್ಪೂರ್ತಿ: ದಂಪತಿಯಿಂದ ಅಂಗಾಂಗ ದಾನ ನಿರ್ಧಾರ

ಉಡುಪಿ: ಉಡುಪಿಯ ಅಂಬಲಪಾಡಿಯಲ್ಲಿರುವ ದಂಪತಿ ಮರಣದ ನಂತರ ಅಂಗಾಂಗ ದಾನ‌ ಮಾಡಲು ನಿರ್ಧರಿಸಿದ್ದಾರೆ.ಈ ಸಂಬಂಧ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಂಪತಿ‌ ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ.ಉಡುಪಿಯ ಅಂಬಲಪಾಡಿಯಲ್ಲಿರುವ ಉಮೇಶ್ ಕುಂದರ್ ಕಪ್ಪೆಟ್ಟು ಮತ್ತು ಅಕ್ಷಯಾ ಶೆಟ್ಟಿ ಈ ದಂಪತಿಯಾಗಿದ್ದಾರೆ.ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಪರೋಪಕಾರವೇ ನಮಗೆ ಸ್ಪೂರ್ತಿ.ಹೀಗಾಗಿ ಅಂಗಾಂಗ ದಾನದ ನಿರ್ಧಾರಕ್ಕೆ ಬಂದಿದ್ದೇವೆ.

ಶೀಘ್ರ ಹಾಜಬ್ಬ ಅವರನ್ನು ಭೇಟಿಯಾಗಿ ಅವರು ಮಾಡುತ್ತಿರುವ ಸಮಾಜಸೇವೆಗಾಗಿ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ ಎಂದು ಪಬ್ಲಿಕ್ ನೆಕ್ಸ್ಟ್ ಜೊತೆ ಉಮೇಶ್ ಕುಂದರ್ ಕಪ್ಪೆಟ್ಡು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/12/2021 04:46 pm

Cinque Terre

22.62 K

Cinque Terre

4

ಸಂಬಂಧಿತ ಸುದ್ದಿ