ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಐಡಿಯಲ್, 'ಪಬ್ಬಾಸ್' ಐಸ್ ಕ್ರೀಮ್ ಮಾಲೀಕ ಪ್ರಭಾಕರ ಕಾಮತ್ ಇನ್ನಿಲ್ಲ

ಮಂಗಳೂರು: ನಗರದಲ್ಲಿ ಐಸ್ ಕ್ರೀಂ ಪ್ರಿಯರ ನೆಚ್ಚಿನ ತಾಣ 'ಐಡಿಯಲ್' ಹಾಗೂ 'ಪಬ್ಬಾಸ್' ಐಸ್ ಕ್ರೀಂ ಪಾರ್ಲರ್ ಗಳನ್ನು ಕಟ್ಟಿ ಬೆಳೆಸಿದ ಶಿಬರೂರು ಪ್ರಭಾಕರ ಕಾಮತ್(79) ಇಂದು ಮುಂಜಾವ ನಿಧನರಾದರು.

ಅ. 29ರಂದು ನಗರದ ಬಿಜೈ ಬಳಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು‌. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದರು. ಅವರು ಐಡಿಯಲ್ ಐಸ್ ಕ್ರೀಂ ಪಾರ್ಲರ್ ಮಾಲೀಕ ಮುಕುಂದ ಕಾಮತ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ‌.

Edited By : Nagaraj Tulugeri
Kshetra Samachara

Kshetra Samachara

06/11/2021 11:03 am

Cinque Terre

10.97 K

Cinque Terre

0