ಕುಂದಾಪುರ: ಕುಂದಾಪುರ ತಾಲೂಕಿನ ಆಲೂರು ಎಂಬಲ್ಲಿ ಮಹಿಳೆಯೊಬ್ಬರು 108 ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ದೀಪಿಕಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಗ 108 ಆಂಬುಲೆನ್ಸ್‌ಗೆ ಕರೆ ಮಾಡಿ ತಿಳಿಸಲಾಯಿತು. ಸ್ಥಳಕ್ಕೆ ಧಾವಿಸಿದ ಆಂಬುಲೆನ್ಸ್ ನಲ್ಲಿ ದೀಪಿಕಾರನ್ನು ಆಸ್ಪತ್ರೆ ಗೆ ಕರೆದುಕೊಂಡು ಹೋಗುವಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವು ಜಾಸ್ತಿ ಆಗಿ ಮಹಿಳೆ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾರೆ. ಆಂಬುಲೆನ್ಸ್ ನಲ್ಲಿದ್ದ EMT (ನರ್ಸ್)ರಾಘವೇಂದ್ರ ಶೆಟ್ಟಿ ಮತ್ತು pilot (ಚಾಲಕರಾದ)ಅಶೋಕ್ ಮೊಗವೀರ ,ತಾಯಿ ಮತ್ತು ಮಗುವನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದರು. ಅಲ್ಲಿನ ವೈದ್ಯಕಾರಿಗಳು ತಾಯಿ ಮತ್ತು ಮಗು ಆರೋಗ್ಯವಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.
Kshetra Samachara
05/09/2021 07:10 pm