ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಆತಂಕ ಸೃಷ್ಟಿಸಿದ ಯುವಕ ಗುಣಮುಖ; ಸಂಬಂಧಿಕರು ಪತ್ತೆ.

ಮಲ್ಪೆ: ಆ.19; ಕಳೆದ ಶನಿವಾರ ಅಪರಿಚಿತ ಮಾನಸಿಕ ಅಸ್ವಸ್ಥನ ಉಗ್ರ ವರ್ತನೆಯಿಂದ ಮಲ್ಪೆ ಬಂದರು ಪ್ರದೇಶದಲ್ಲಿ ಆತಂಕದ ವಾತಾವರಣವು ಸೃಷ್ಟಿಯಾಗಿತ್ತು. ಉಡುಪಿಯ ಸಾಮಾಜಿಕ ಕಾರ್ಯಕರ್ತರು ಹಾಗೂ ಮಲ್ಪೆ ಠಾಣೆಯ ಪೋಲಿಸರು ಯುವಕನನ್ನು ರಕ್ಷಿಸಿ, ದೊಡ್ಡಣಗುಡ್ಡೆ. ಡಾ. ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದರು. ಯುವಕ ಸಂಪೂರ್ಣ ಗುಣಮುಖನಾಗಿ ಸಹಜ ಸ್ಥಿತಿಗೆ ಬಂದಿರುವುದರಿಂದ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಯಿತು. ಆ ಬಳಿಕ ಯುವಕನ ವಿಳಾಸ ಪತ್ತೆಗೊಳಿಸಿ ಮಲ್ಪೆಯಲ್ಲಿ ಮೀನುಗಾರಿಕೆ ಬೋಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಹೋದರನ ವಶಕ್ಕೆ ಒಪ್ಪಿಸಲಾಯಿತು.

ಡಾ.ಎ.ವಿ. ಬಾಳಿಗ ಆಸ್ಪತ್ರೆಯ ವೈದ್ಯರಾದ ಡಾ.ಪಿ.ವಿ.ಭಂಡಾರಿ ಅವರು, ರೋಗಿಗೆ ಉಚಿತವಾಗಿ ಚಿಕಿತ್ಸೆ ಒದಗಿಸಿ ಮಾನವೀಯತೆ ತೋರಿದರು. ಆಸ್ಪತ್ರೆ ಕ್ಯಾಂಟೀನ್ ಮಾಲಿಕರು ರೋಗಿಗೆ ಉಚಿತವಾಗಿ ಊಟೋಪಚಾರ ಒದಗಿಸಿದರು. ಕಾರ್ಯಚರಣೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿತು.

ಯುವಕನ ರಕ್ಷಣಾ ಕಾರ್ಯಚರಣೆಯು ಮಲ್ಪೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಈ ಸಕ್ತಿವೇಲು ಅವರ ಮಾರ್ಗದರ್ಶನದಂತೆ ನಡೆಯಿತು. ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಹಾಗೂ ಮಲ್ಪೆ ಠಾಣೆಯ ಸಿಬ್ಬಂದಿಗಳಾದ ರತ್ನಾಕರ್ ಶೆಟ್ಟಿ, ರವಿರಾಜ್ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

Edited By : Shivu K
Kshetra Samachara

Kshetra Samachara

19/08/2021 10:53 am

Cinque Terre

25.93 K

Cinque Terre

1

ಸಂಬಂಧಿತ ಸುದ್ದಿ