ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಈವರೆಗೂ ಟೊಮೇಟೊ ಫ್ಲೂ ಪತ್ತೆಯಾಗಿಲ್ಲ: ಡಿಸಿ ಸ್ಪಷ್ಟನೆ

ಉಡುಪಿ: ಉಡುಪಿಯಲ್ಲಿ ಈವರೆಗೂ ಟೊಮೇಟೊ ಫ್ಲೂ ಪತ್ತೆಯಾಗಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ಪಷ್ಟಪಡಿಸಿದ್ದಾರೆ.

ಮಕ್ಕಳಲ್ಲಿ ಜ್ವರ ಕಂಡು ಬಂದಾಗ ತಾಂತ್ರಿಕವಾಗಿ ಪರೀಕ್ಷೆ ನಡೆಸಲಾಗುತ್ತದೆ. ಟೊಮೇಟೊ ಫ್ಲೂಗೆ ಹೋಲುವಂತಹ ಒಂದು ಪ್ರಕರಣ ಮೂರು ತಿಂಗಳ ಹಿಂದೆ ಪತ್ತೆಯಾಗಿತ್ತು. ಫೂಟ್ ಆ್ಯಂಡ್ ಹ್ಯಾಂಡ್ ಲಕ್ಷಣಗಳಿರುವ ಪ್ರಕರಣ ಇದಾಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಗೆ ನಾವು ವರದಿ ಮಾಡಿದ್ದೇವೆ. ಟೊಮೇಟೋ ಫ್ಲೂ ಮತ್ತು ಈ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಇತ್ತೀಚಿಗೆ ಯಾವುದಾದರೂ ಹೊಸ ಪ್ರಕರಣ ಬಂದಿದೆಯೇ ಎಂಬ ಮಾಹಿತಿ ಸಂಗ್ರಹಿಸುತ್ತೇವೆ. ಖಾಸಗಿ ಕ್ಲಿನಿಕ್‌ಗಳಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ.ಎಲ್ಲಾ ಮಕ್ಕಳ ತಜ್ಞರಿಗೂ ಅಲರ್ಟ್ ಇರಲು ಸೂಚಿಸಿದ್ದೇವೆ. ಕೇರಳದಲ್ಲಿ ಪ್ರಕರಣ ಪತ್ತೆಯಾದ ನಂತರ ಮಕ್ಕಳ ತಜ್ಞರಿಗೆ ಸೂಚನೆಗಳನ್ನು ಕೊಟ್ಟಿದ್ದೇವೆ ಎಂದು ತಿಳಿಸಿದರು.

Edited By : Manjunath H D
Kshetra Samachara

Kshetra Samachara

16/05/2022 06:45 pm

Cinque Terre

9.66 K

Cinque Terre

0

ಸಂಬಂಧಿತ ಸುದ್ದಿ