ವರದಿ: ರಹೀಂ ಉಜಿರೆ
ಉಡುಪಿ :ರಾಜ್ಯದಲ್ಲಿ ಕೊರೊನಾ ತಕ್ಕಮಟ್ಟಿಗೆ ಕಂಟ್ರೋಲ್ ಗೆ ಬಂದಿದೆ.ಆದರೆ ಕೃಷ್ಣನಗರಿ ಉಡುಪಿಯಲ್ಲಿ ಪಾಸಿಟಿವಿಟಿ ರೇಟ್ ನಿಯಂತ್ರಣಕ್ಕೆ ಬರುತ್ತಿಲ್ಲ, ದಿನೇ ದಿನೇ ಕೋವಿಡ್ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಟಫ್ ರೂಲ್ಸ್‌ಗೆ ಮುಂದಾಗಿದೆ.
ರಾಜ್ಯದೆಲ್ಲಡೆ ಕೊರೋನಾ ಪ್ರಕರಣಗಳು ಕಡಿಮೆ ಆಗುತ್ತಿದ್ದಂತೆ, ಕಠಿಣ ನಿಯಮಗಳು ಸಡಿಲಿಕೆಗೊಳ್ಳುತ್ತಿವೆ.ಶಾಲೆ ಕಾಲೇಜುಗಳು ಆರಂಭವಾಗಿವೆ. ಇಷ್ಟಾದ್ರೂ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಇನ್ನೂ ತಹಬಂದಿಗೆ ಬಂದಿಲ್ಲ....
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು, ಹೆಚ್ಚಾಗುತ್ತಿದ್ದು, ಪಾಸಿಟಿವ್ ರೇಟ್ 2.5 ರಿಂದ 3 ಕ್ಕೆ ಏರಿಕೆಯಾಗಿದೆ.ಇಷ್ಟಾದ್ರೂ, ಜಿಲ್ಲೆಯ ಹಲವೆಡೆ ಕೊರೋನಾ ರೂಲ್ಸ್ ಬ್ರೇಕ್ ಆಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಟಫ್ ರೂಲ್ಸ್‌ಗೆ ಮುಂದಾಗಿದೆ.lಮಾಸ್ಕ್ ಧರಿಸದೆ ಓಡಾಡುವವರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದ್ದು, ಪ್ರತಿದಿನ 10 ಸಾವಿರ ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದೆ. ಈ ಬಗ್ಗೆ ತಜ್ಞರ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಅಲ್ಲದೇ, ವಾಹನಗಳ ತಪಾಸಣೆಯೂ ತೀವ್ರಗೊಂಡಿದೆ. ಮನೆ ಮನೆಗೆ ತೆರಳಿ ಹಿರಿಯ ನಾಗರೀಕರಿಗೆ ವಾಕ್ಸಿನ್ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಇನ್ನು ರಾಜ್ಯದ ಇತರೆ ಜಿಲ್ಲೆಯಲ್ಲಿ ಶಾಲೆ ಆರಂಭ ಆದ್ರೂ ಉಡುಪಿಯಲ್ಲಿ ಆರಂಭವಾಗಿಲ್ಲ. ಶಾಲೆ ಆರಂಭಿಸಲು ನಮಗೂ ಆಸಕ್ತಿ ಇದೆ. ಕೋವಿಡ್ ಗೈಡ್ ಲೈನ್ಸ್ ಗಟ್ಟಿಗೊಳಿಸಬೇಕು. ಪಾಸಿಟಿವಿಟಿ ರೇಟ್ ಕಡಿಮೆಯಾಗಬೇಕು. ನಂತರ ಶಾಲೆ ಆರಂಭಿಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲಾಡಳಿತ ಟಫ್ ರೂಲ್ಸ್‌ಗೆ ಮುಂದಾಗಿದ್ದರೂ ಜಿಲ್ಲೆಯಲ್ಲಿ ರಾಜಕೀಯ ಕಾರ್ಯಕ್ರಮಗಳು ಮಾತ್ರ ನಿರಂತರ ನಡೆಯುತ್ತಲೇ ಇವೆ.ಇದನ್ನು ನಿಯಂತ್ರಿಸುವವರಾರು ಎಂಬುದು ಜಿಲ್ಲೆಯ ಜನರ ಪ್ರಶ್ನೆಯಾಗಿದೆ.
Kshetra Samachara
23/08/2021 05:42 pm