ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆನ್ ಲೈನ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳಿಗೆ ಕೊರೊನಾ ಜಾಗೃತಿ- ಅರಿವು; ಜಿಲ್ಲಾಧಿಕಾರಿ

ಉಡುಪಿ: ಶಾಲಾ- ಕಾಲೇಜುಗಳಲ್ಲಿ ನಡೆಯುವ ಆನ್ ಲೈನ್ ಕ್ಲಾಸ್ ಗಳಲ್ಲಿ ವಾರಕ್ಕೆ ಒಮ್ಮೆ ಕೊರೊನಾ ಕುರಿತಾದ ಒಂದು ವಿಷಯದ ಕುರಿತು 5 ನಿಮಿಷ ಕಾಲ ತರಗತಿಯಲ್ಲಿ ಶಿಕ್ಷಕರ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಶಾಲಾ, ಕಾಲೇಜುಗಳು ಇದೀಗ ಆನ್ ಲೈನ್ ಕ್ಲಾಸ್ ನಡೆಸುತ್ತಿವೆ. ಜಿಲ್ಲಾಡಳಿತ ಪ್ರತಿವಾರ ಕೋವಿಡ್ ಸಂಬಂಧಿತ ಒಂದು ವಿಷಯದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರ ಮೂಲಕ ಈ ಕಾರ್ಯ ಮಾಡಲಿದೆ. ತರಗತಿಯಲ್ಲಿ 5 ನಿಮಿಷದ ಕಾಲ ನಿರ್ದಿಷ್ಟ ವಿಷಯದ ಕುರಿತು ಶಿಕ್ಷಕರು ಮಾಹಿತಿ ನೀಡಬೇಕು. ಅಂದರೆ ಒಂದು ದಿನ ಮಾಸ್ಕ್ ಮಹತ್ವದ ಕುರಿತು,ಇನ್ನೊಮ್ಮೆ ಸಾಮಾಜಿಕ ಅಂತರದ ಮಹತ್ವದ ಬಗ್ಗೆ ಮತ್ತು ಪದೇ ಪದೆ ಕೈ ತೊಳೆಯಬೇಕಾದ ಅಗತ್ಯತೆ ಬಗ್ಗೆ ಹೀಗೆ ಒಂದೊಂದೇ ವಿಷಯದ ಕುರಿತು ಮಕ್ಕಳಿಗೆ ಹೇಳಿದಾಗ ಮಕ್ಕಳಿಗೂ ಇದರ ಮಹತ್ವ ತಿಳಿಯುತ್ತದೆ. ಜೊತೆಗೆ ಇದರ ವೀಡಿಯೋ ರೆಕಾರ್ಡ್ ಮಾಡಿ ಶಾಲೆಯವರು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದರು.

Edited By : Manjunath H D
Kshetra Samachara

Kshetra Samachara

17/10/2020 12:05 pm

Cinque Terre

16.01 K

Cinque Terre

3

ಸಂಬಂಧಿತ ಸುದ್ದಿ