ಮುಲ್ಕಿ: ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಮತ್ತು ಅವರ ಮುಂದಿನ ಉಜ್ವಲ ಭವಿಷ್ಯ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ವಿವಿಧ ಇಲಾಖೆ, ಸ್ವಸಹಾಯ ಸಂಘ ಸಹಕಾರದೊಂದಿಗೆ ಗುಲಾಬಿ ಅಭಿಯಾನ ಹಾಗೂ ಜಾಥಾ ಮುಲ್ಕಿ ಕಿಲ್ಪಾಡಿ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿ ಸ್ಕೌಟ್ ಮತ್ತು ಗೈಡ್ಸ್ ಮುಲ್ಕಿ ವಲಯದ ಸ್ಥಳೀಯ ಸಂಸ್ಥೆ ಅಧ್ಯಕ್ಷ ಸರ್ವೋತ್ತಮ ಅಂಚನ್ ಮಾತನಾಡಿ, ನಮ್ಮ ದೇಶವನ್ನು ತಂಬಾಕು ಮುಕ್ತ ರಾಷ್ಟ್ರವನ್ನಾಗಿ ಸಲು ವಿದ್ಯಾರ್ಥಿಗಳು ಪಣತೊಡಬೇಕು. ಈ ನಿಟ್ಟಿನಲ್ಲಿ ಶಾಲೆಯ ಮಕ್ಕಳು ಪರಿಸರದ ಅಂಗಡಿಗಳಿಗೆ ಹಾಗೂ ಉದ್ಯಮ ಮಳಿಗೆಗಳಿಗೆ ಜಾಥಾ ಮೂಲಕ ತಂಬಾಕು, ಗಾಂಜಾ ಇನ್ನಿತರ ವಸ್ತುಗಳನ್ನು ಮಾರಾಟ ಮಾಡದಂತೆ ಗುಲಾಬಿ ಹೂ ನೀಡಿ ಮನವೊಲಿಸಿ ಪ್ರೇರಣೆ ನೀಡುವ ಮೂಲಕ ರಾಷ್ಟ್ರವನ್ನು ತಂಬಾಕು ಮುಕ್ತವನ್ನಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯೋಪಾಧ್ಯಾಯಿನಿ ಚಂದ್ರಿಕಾ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿದ್ದು, ಗುಲಾಬಿ ಅಭಿಯಾನದ ಮೂಲಕ ದುಶ್ಚಟ ಬಗ್ಗೆ ಮನವೊಲಿಸಿ ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.
ಬಳಿಕ ವಿದ್ಯಾರ್ಥಿಗಳು ಮುಲ್ಕಿ ಪರಿಸರದ ಅಂಗಡಿಗಳಿಗೆ ತೆರಳಿ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡದಂತೆ ಗುಲಾಬಿ ಹೂವು ನೀಡಿ ಅರಿವು ಮೂಡಿಸಿದರು. ಶಿಕ್ಷಕಿ ಶ್ರೀ ಲಕ್ಷ್ಮಿ ಕಾಮತ್ ಸ್ವಾಗತಿಸಿದರು. ಸಹಶಿಕ್ಷಕಿ ಕಾಮಾಕ್ಷಿ ಆರ್.ನಾಯಕ್ ವಂದಿಸಿದರು. ಶಿಕ್ಷಕಿ ಶೈಲಜಾ ನಿರೂಪಿಸಿದರು.
Kshetra Samachara
24/02/2021 02:01 pm