ಕಾರವಾರ: ಡೆಡ್ಲಿ ಸೋಂಕು ಕೊರೊನಾ ಬಂದಾಗಿನಿಂದ ಜನ ಮನೆಯಲ್ಲಿಯೇ ಇದ್ದು ಇದ್ದು ಸಾಕಷ್ಟು ಕಿರಿಕಿರಿ ಅನುಭವಿಸಿದ್ದಾರೆ.
ಯಾವಾಗಾದ್ರು ಇದ್ದೇಲ್ಲದಕ್ಕೂ ಮುಕ್ತಿ ಯಾವಾಗ ಎಂದವರಿಗೆ ಸದ್ಯ ಒಂದು ಹಂತಕ್ಕೆ ಸಮಾಧಾನ ದೊರೆತಿದೆ ಹಾಗಾಗಿ ಸಿಕ್ಕ ಸಣ್ಣ ಸಮಯವನ್ನು ಮನೆಯಿಂದ ಆಚೆ ಕಳೆಯಲು ಜನ ಫೀಕ್ಸ್ ಆಗಿದ್ದಾರೆ.
ಹಾಗಾಗಿಯೇ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಡಲತೀರಗಳು ಪ್ರವಾಸಿಗರಿಂದ ಹೌಸ್ ಫುಲ್ ಆಗಿದ್ದು, ವೀಕೆಂಡ್ ಹಾಗೂ ಕ್ರಿಸ್ಮಸ್ ಆಚರಣೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
ಕೊರೊನಾ ಭಯ ಲೆಕ್ಕಿಸದ ಜನ ಕುಟುಂಬದೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದಾರೆ. ವೀಕೆಂಡ್ ಜೊತೆ ಸಾಲು ಸಾಲು ರಜೆ, ಕ್ರಿಸ್ ಮಸ್ ಹಬ್ಬದ ಹಿನ್ನೆಲೆ ಸಾವಿರಾರು ಜನ ಆಗಮಿಸುತ್ತಿದ್ದಾರೆ.
ಜಿಲ್ಲೆಯ ಗೋಕರ್ಣ, ಮುರಡೇಶ್ವರ, ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರು ತುಂಬಿ ತುಳುಕುತಿದ್ದು, ಕೊರೊನಾಗೆ ಡೊಂಟ್ ಕೇರ್ ಎಂದು ಸಮುದ್ರದ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಿದರು.
Kshetra Samachara
25/12/2020 10:54 pm