ಪಬ್ಲಿಕ್ ನೆಕ್ಸ್ಟ್ ತನಿಖಾ ವರದಿ ಬಿಗ್ ಇಂಪ್ಯಾಕ್ಟ್
ದಾಮೋದರ ಮೊಗವೀರ ನಾಯಕವಾಡಿ ಪಬ್ಲಿಕ್ ನೆಕ್ಸ್ಟ್
ಬೈಂದೂರು : ಭಾರಿ ಪ್ರಮಾಣದಲ್ಲಿ ಅಲೋಪಥಿ ಔಷಧಿ ಅಕ್ರಮ ದಾಸ್ತಾನು, ಅಧಿಕಾರಿಗಳ ದಾಳಿ ಈಗ ಆಯುರ್ವೇದ ವೈದ್ಯರ ತಂಡ ಫರಾರಿ.
ನಿರ್ಭೀತ ಸುದ್ದಿಗಳಿಗೆ ಹೆಸರಾದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೈಂದೂರು ತಾಲೂಕಿನ ಗೋಳಿಹೊಳಿ ಗ್ರಾಮದಲ್ಲಿ ನಡೆಯುತ್ತಿದ್ದ ಈ ಅಕ್ರಮ ವ್ಯವಹಾರದ ಬಗ್ಗೆ ವಿಸ್ತೃತ ವರದಿ ಮಾಡಿದ್ದನ್ನು ನೀವು ನೋಡಿದ್ದೀರಲ್ಲವೆ?
ಹೌದು ಇದು ನಿಮ್ಮ PublicNext ಮಾಧ್ಯಮದ ಬಿಗ್ ಇಂಪ್ಯಾಕ್ಟ್ . ಆಯುರ್ವೇದ ಹೆಸರಲ್ಲಿ ಅಲೋಪಥಿ ಔಷಧಿ ಅಕ್ರಮ ದಾಸ್ತಾನು ಮಾಡಿಕೊಂಡು ಸರಕಾರದ ಕಣ್ಣಿಗೆ ಮಣ್ಣೆರೆಚುತ್ತಿದ್ದರಲ್ಲದೆ ಬಡ ರೋಗಿಗಳ ಜೀವದ ಜೊತೆ ಚಲ್ಲಾಟವಾಡುತ್ತ, ಆರ್ಥಿಕವಾಗಿ ಅವರನ್ನು ಶೋಷಣೆ ಮಾಡುತ್ತಿದ್ದ ಈ ವೈದ್ಯರು ಈಗ ತಲೆಮರೆಸಿಕೊಂಡಿದ್ದಾರಲ್ಲದೆ ತಮ್ಮನ್ನು ಕಾಪಾಡಿ ಎಂದು ಬೆಂಗಳೂರಿನಲ್ಲಿ ಕೆಲವು ಶಾಸಕರು ಹಾಗೂ ಮಂತ್ರಿಗಳ ಕಾಲಿಗೆ ಬೀಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಷ್ಟು ಮಾತ್ರವಲ್ಲ, ಈ ಖದೀಮ ವೈದ್ಯರು ಯಾವ ಕೆಳಮಟ್ಟಕ್ಕೆ ಇಳಿದಿದ್ದಾರೆಂದರೆ ಇವರ ಈ ಕಳ್ಳಾಟವನ್ನು ಬೆಳಕಿಗೆ ತಂದ ಮಾಧ್ಯಮಗಳ ವಿರುದ್ಧ ಅಪಪ್ರಚಾರ ಮಾಡಿ ಸಾರ್ವಜನಿಕರ ದಿಕ್ಕು ತಪ್ಪಿಸುವ ಕುತಂತ್ರ ನಡೆಸಿದ್ದಾರೆ. ಇದೂ ಫಲಿಸದಿದ್ದಾಗ ಕೆಲವು ಗೂಂಡಾಗಳ ಮೂಲಕ ಕೆಲವು ಮಾಧ್ಯಮಗಳ ವರದಿಗಾರರಿಗೆ ಜೀವ ಬೆದರಿಕೆ ಹಾಕಿಸಲು ಮುಂದಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ಈ ಮಾಫೀಯಾ ಭಾರಿ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿ ತನಿಖೆ ನಡೆಸಬೇಕಲ್ಲದೆ ಮಾಧ್ಯಮ ವರದಿಗಾರರಿಗೆ ರಕ್ಷಣೆ ನೀಡುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು.
ಘಟನೆ ಒಂದು ಝಲಕ್
ಅಕ್ರಮ ಔಷಧಿ ದಾಸ್ತಾನು ಮಾಡಿದ್ದಾರೆನ್ನಲಾದ ಕೆಲವು ಆಯುರ್ವೇದ ವೈದ್ಯರ ವಿಚಾರಣೆಗಾಗಿ ADC ನಾಗರಾಜ ನೋಟಿಸ್ ನೀಡಲು ಬರುತ್ತಿದ್ದಾರೆಂಬ ವಿಷಯ ಗೊತ್ತಾಗುತ್ತಲೇ ಸರಿ ಸುಮಾರು ಹದಿನೈದು ಇಪ್ಪತ್ತು ವೈದ್ಯರು ಕಳೆದ ಒಂದು 10 - 12 ದಿನಗಳಿಂದ ಕ್ಲಿನಿಕ್ ಬಂದು ಮಾಡಿ ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗ ಕಡೆ ಓಡಾಡುತ್ತಿದ್ದಾರೆ.
ಅನುಮತಿ ಇಲ್ಲದೆ ತಮ್ಮ ಕ್ಲಿನಿಕ್ಕಿನಲ್ಲಿ ಅಲೋಪತಿ ಔಷಧಿ ದಾಸ್ತಾನು ಮಾಡಿಕೊಂಡಿದ್ದ ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕೆಲವು ಆಯುರ್ವೇದ ವೈದ್ಯರ ಕ್ಲಿನಿಕ್ ಮೇಲೆ ಡ್ರಗ್ ಕಂಟ್ರೋಲ್ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು .
PublicNext
23/02/2022 04:19 pm