ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಆರ್ಭಟ ಜೋರಾಗಿದೆ. ಇಷ್ಟು ದಿನ ಪಾಸಿಟಿವ್ ಕೇಸ್ ನೂರಾರು ಸಂಖ್ಯೆಗಳಲ್ಲಿ ಬರುತ್ತಿತ್ತು. ಕಳೆದೆರಡು ದಿನಗಳಿಂದ ಪಾಸಿಟಿವ್ ಪ್ರಕರಣ ಸಾವಿರದ ಗಡಿ ದಾಟುತ್ತಿದೆ. ಪಾಸಿಟಿವಿಟಿ ರೇಟ್ ಶೇಕಡ 20 ರ ಆಸುಪಾಸಿನಲ್ಲಿದೆ. ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡ ಎಲ್ಲ ಕ್ರಮಗಳನ್ನು ದಾಟಿ ಪಾಸಿಟಿವ್ ಸಂಖ್ಯೆಗಳು ಹೆಚ್ಚುತ್ತಿವೆ. ಜಿಲ್ಲೆಯ ಆಕ್ಟಿವ್ ಕೇಸುಗಳ ಸಂಖ್ಯೆ 6000ದ ಗಡಿದಾಟಿದೆ.
ಇನ್ನು ಮೂರು ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಆವರಿಸಿದೆ. ಶಾಲಾ-ಕಾಲೇಜುಗಳಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಒಟ್ಟು ಐದು ಶಾಲೆಗಳನ್ನು ಮುಚ್ಚಿದ್ದು ಪಾಸಿಟಿವ್ ಹತೋಟಿಗೆ ಬಂದ ನಂತರ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ.
ಪಾಸಿಟಿವ್ ಹೆಚ್ಚಾಗುತ್ತಿದ್ದರೂ ಮೊದಲ ಮತ್ತು ಎರಡನೆಯ ಅಲೆಗೆ ಹೋಲಿಕೆ ಮಾಡಿದರೆ ಗಂಭೀರತೆ ಕಡಿಮೆ ಇದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕೂಡ ಕಡಿಮೆ ಎಂಬುದು ನೆಮ್ಮದಿಯ ವಿಚಾರ.
Kshetra Samachara
25/01/2022 02:41 pm