ಮಣಿಪಾಲ: ಬೀದಿನಾಟಕ ಮೂಲಕ ಆರೋಗ್ಯ, ಶಿಕ್ಷಣ ಕುರಿತು ಮಾಹಿತಿ ಕಾರ್ಯಕ್ರಮ ಮಣಿಪಾಲದ ಟೈಗರ್ ಸರ್ಕಲ್ ನಲ್ಲಿ ನಡೆಯಿತು. ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮುಂದಾಳತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡದಿಂದ 'ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯ ರೋಗ ಮತ್ತು ಕೊರೊನಾ ಮಹಾಮಾರಿ ಕುರಿತು ಮಾಹಿತಿ' ಜಾನಪದ ಕಲಾ ಪ್ರದರ್ಶನ, ಬೀದಿನಾಟಕ ನಡೆಯಿತು.
ಜಿಪಂ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಉಡುಪಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿಯ ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಡಾ.ಗೌರಿ ಉದ್ಘಾಟಿಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ತಾಲೂಕು ಶಿಕ್ಷಣಾಧಿಕಾರಿ ಚಂದ್ರಕಲಾ, ರೋಟರಿ ಮಣಿಪಾಲ್ ಅಧ್ಯಕ್ಷ ಡಾ.ವಿರೂಪಾಕ್ಷ ದೇವರಮನೆ, ರೊ. ಶ್ರೀಪತಿ, ಯುಪಿಎಂಸಿ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ., ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್, ಬೀದಿನಾಟಕ ನಿರ್ದೇಶಕ ರಾಮಾಂಜಿ ʼನಮ್ಮ ಭೂಮಿʼ, ಸಂಚಾಲಕರಾದ ಶಿಲ್ಪಾ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
ಬೀದಿನಾಟಕ ವಿದ್ಯಾರ್ಥಿಗಳಾದ ಚಿಣ್ಣಪ್ಪ, ಹರ್ಷಿತ್ ವಿ.ಶೆಟ್ಟಿ, ಹಿಮಲ್ ಕುಮಾರ್, ಪ್ರಾಕ್ಷ, ದೀಕ್ಷಾ ಆಚಾರ್ಯ, ಯಶ್ವಿತಾ, ಸಂಗೀತಾ, ನಿಧಿ, ಶ್ರಾವ್ಯಾ, ಮನ್ವಿತ್, ನಿಖಿಲ್ ಅವರು ವಿವೇಕಾನಂದ ಎನ್. ರಚನೆಯ ಬೀದಿನಾಟಕ ನಡೆಸಿಕೊಟ್ಟರು. ಇದೇ ತಂಡದಿಂದ 20 ಪ್ರದರ್ಶನಗಳು ಜಿಲ್ಲೆಯಾದ್ಯಂತ ನಡೆಯಲಿವೆ. ಪ್ರತಿಷ್ಠಾನ ಸಂಚಾಲಕ ರವಿರಾಜ್ ಸ್ವಾಗತಿಸಿ, ನಿರೂಪಿಸಿದರು. ಕಲಾವಿದೆ ಶಿಲ್ಪಾ ಜೋಶಿ ವಂದಿಸಿದರು.
Kshetra Samachara
24/01/2022 06:12 pm