ಕಾಪು: 15 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುವ ಕೋವಿಡ್ ಲಸಿಕಾ ಶಿಬಿರ ಇಂದು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ದಂಡತೀರ್ಥ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದು, ಶಾಸಕ ಲಾಲಾಜಿ ಆರ್. ಮೆಂಡನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಕೋವಿಡ್- ಓಮಿಕ್ರಾನ್ ಬಗ್ಗೆ ನಾವೇ ಸ್ವತಃ ಎಚ್ಚರ ವಹಿಸುವ ಅಗತ್ಯವಿದೆ. ಇದೀಗ ಮೂರನೇ ಅಲೆ ಭೀತಿಯೂ ಕಾಡುತ್ತಿದ್ದು, ಹಿಂದೆ ಆಗಿರುವ ಕಷ್ಟ- ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಬಹು ಮುಖ್ಯ ಎಂದರು.
ದಂಡತೀರ್ಥ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್, ಪ್ರಿನ್ಸಿಪಾಲ್ ವರ್ಷಾ ಪ್ರಭು, ವೈದ್ಯಾಧಿಕಾರಿ ಡಾ.ಸುಬ್ರಾಯ ಕಾಮತ್, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ, ಶಿವಣ್ಣ ಬಾಯರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/01/2022 03:24 pm