ಉಡುಪಿ: ಉಡುಪಿಯಲ್ಲಿ ಎರಡು ಒಮಿಕ್ರಾನ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇವತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.ಇಬ್ಬರು ಒಮಿಕ್ರಾನ್ ಪೀಡಿತರ ಪೈಕಿ ಒಬ್ಬರು ಕ್ಯಾನ್ಸರ್ ಪೀಡಿತರರಾಗಿದ್ದರೂ ಆರೋಗ್ಯವಾಗಿದ್ದಾರೆ.ಇನ್ನೊಬ್ಬರೂ
ಸಂಪೂರ್ಣ ಆರೋಗ್ಯವಾಗಿದ್ದಾರೆ. ಇಬ್ಬರಿಗೂ ಎರಡು ಡೋಸ್ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಆಗಿದ್ದು,
ಲಸಿಕೆ ತೆಗೆದುಕೊಂಡ ಕಾರಣ ಯಾವುದೇ ದುಷ್ಪರಿಣಾಮ ಆಗಿಲ್ಲ ಎಂದು ಹೇಳಿದರು.
ಪ್ರಾಥಮಿಕ ಸಂಪರ್ಕದಲ್ಲಿ ಯಾರಿಗೂ ಪಾಸಿಟಿವ್ ಇಲ್ಲ,ಹೀಗಾಗಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ ಅವರು , ಸುತ್ತಮುತ್ತ ನಡೆಸಿದ ಎರಡು ಸಾವಿರ ಟೆಸ್ಟ್ ರಿಪೋರ್ಟ್ ನೆಗೆಟಿವ್ ಇದೆ. ಜಿಲ್ಲೆಯಲ್ಲಿ ಒಂದು ವಾರದಲ್ಲಿ 19 ಸಾವಿರ ಕೊರೋನಾ ಟೆಸ್ಟ್ ಮಾಡಿದ್ದೇವೆ.ಜಿಲ್ಲೆಯ ಪಾಸಿಟಿವಿಟಿ 0.11% ಇದೆ.
ಜಿಲ್ಲೆಯಲ್ಲಿ 95.6 ಫಸ್ಟ್, 80% ಸೆಕೆಂಡ್ ಡೋಸ್ ಪೂರ್ಣವಾಗಿದೆ. ಡಿಸೆಂಬರ್ ಕೊನೆಗೆ ಶೇ. 90 ತಲುಪಲು ಪ್ರಯತ್ನಿಸ್ತೇವೆ. ವಿದೇಶ, ಮಹಾರಾಷ್ಟ್ರ ಕೇರಳದ ಪ್ರಯಾಣಿಕರ ಮೇಲೆ ನಿಗಾ ಇಡಲಾಗುವುದು ಎಂದು ಡಿಸಿ ಕೂರ್ಮರಾವ್ ಹೇಳಿದ್ದಾರೆ.
Kshetra Samachara
20/12/2021 06:09 pm