ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

234 ದಿನಗಳ ಬಳಿಕ ಮೃತಪಟ್ಟವರ ಹೆಸರಿನಲ್ಲಿ ಕೋವಿಡ್ ಎರಡನೇ ಲಸಿಕೆ ವರದಿ!

ಬಂಟ್ವಾಳ: ಕೋವಿಡ್ ಲಸಿಕೆಯ ಪ್ರಥಮ ಡೋಸ್ ಪಡೆದು 234 ದಿನಗಳ ಬಳಿಕ ಮೃತಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಆರೋಗ್ಯ ಇಲಾಖೆ ಎರಡನೇ ಡೋಸ್ ನೀಡಿದೆಯೇ? ಅವರ ಸಂಬಂಧಿ ನೀಡಿದ ಮಾಹಿತಿ ಪ್ರಕಾರ ಹೌದು.

ಪುಣಚ ಗ್ರಾಮದ ನಡುಮನೆ ಕುಂಞಣ್ಣ ಎನ್.ರೈ ಅವರಿಗೆ 2021 ಎ.20 ರಂದು ಮೊದಲನೇ ಡೋಸ್ ಕೊವಾಕ್ಸಿನ್ ಲಸಿಕೆಯನ್ನು ನೀಡಲಾಗಿತ್ತು. 71 ವರ್ಷದ ಅವಿವಾಹಿತರಾಗಿದ್ದ ಅವರು ಆ.15 ರಂದು ನಿಧನ ಹೊಂದಿದ್ದರು.

ಡಿ.9 ರಂದು ಕುಂಞಣ್ಣ ರೈ ಅವರ ಅಣ್ಣನ ಪುತ್ರ ರವಿಚಂದ್ರ ಅವರಿಗೆ ಆಸ್ಪತ್ರೆಯಿಂದ ಫೋನ್ ಬಂದಿದ್ದು, ಕುಂಞಣ್ಣ ರೈಅವರಿಗೆ ಲಸಿಕೆ ಹಾಕಲಿಕ್ಕಿದೆ ಎಂದು ಹೇಳಿದ್ದರು. ಅವರು ಮೃತಪಟ್ಟ ವಿಷಯವನ್ನು ಅವರಿಗೆ ತಿಳಿಸಿದ್ದರೂ, ಡಿ.10 ರಂದು ಅವರ ಹೆಸರಲ್ಲಿ ಕೊವಾಕ್ಸಿನ್ ಎರಡನೇ ಡೋಸ್ ನೀಡಿದ್ದ ಬಗ್ಗೆ ರಿಪೋರ್ಟ್ ಕಳುಹಿಸಲಾಗಿತ್ತು. ಹಲವಾರು ಮಂದಿಗೆ ಪ್ರಥಮ ಡೋಸ್ ಮಾತ್ರ ನೀಡಲಾಗಿದ್ದರೂ, ಎರಡನೇ ಡೋಸ್ ಸಹ ನೀಡಲಾಗಿದೆ ಎಂಬ ವರದಿ ಬರುತ್ತಿದೆ. ಆರೋಗ್ಯ ಇಲಾಖೆಯ ಇಂಥ ಎಡವಟ್ಟುಗಳು ಹಲವಾರು ಸಂಭವಿಸಿದ್ದು, ಅವುಗಳಿಗೆ ಇದೊಂದು ಸೇರ್ಪಡೆ.

Edited By : Nirmala Aralikatti
Kshetra Samachara

Kshetra Samachara

14/12/2021 12:41 pm

Cinque Terre

6.52 K

Cinque Terre

1

ಸಂಬಂಧಿತ ಸುದ್ದಿ