ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ನಗುನಗುತಾ ಲಸಿಕೆ ಪಡೆದು ಖುಷಿ ಪಟ್ಟ ಶತಾಯುಷಿ ಅಜ್ಜಿ

ಕಾರ್ಕಳ: ಉಡುಪಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಮನೆ-ಮನೆಗೆ ತೆರಳಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಖ್ಯವಾಗಿ ಲಸಿಕೆ ಪಡೆಯದ ಹಿರಿಯ ನಾಗರಿಕರಿಗೆ ಲಸಿಕೆ ಹಾಕುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.

ನಿನ್ನೆ ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ 101ರ ಹರೆಯದ ವಯೋವೃದ್ಧೆ ರತಿ ಪೂಜಾರ್ತಿ ಎಂಬವರಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭ ಶತಾಯುಷಿ ಅಜ್ಜಿ, ಆರೋಗ್ಯ ಕಾರ್ಯಕರ್ತರನ್ನು ಉತ್ಸಾಹದಿಂದಲೇ ಸ್ವಾಗತಿಸಿ, ಖುಷಿ ಖುಷಿಯಿಂದಲೇ ಲಸಿಕೆ ಪಡೆದುಕೊಂಡು, ಲಸಿಕೆ ಪಡೆಯಲು ಭೀತಿಯಿಂದ ಹಿಂಜರಿಯುವವರಿಗೆ ಮಾದರಿ ಎನಿಸಿದರು.

ಸಿಸ್ಟರ್ ಕುಮುದಾವತಿ, ಆರೋಗ್ಯ ಕಾರ್ಯಕರ್ತೆಯರಾದ ಅನಿತಾ, ಸುಮಾ ಅವರು ಈ ಜೀವನೋತ್ಸಾಹದ ಹಿರಿಯ ಜೀವಕ್ಕೆ ಲಸಿಕೆ ನೀಡಿದ ನಂತರ ಅಜ್ಜಿಯೊಂದಿಗೆ ವಿಜಯ ಸಂಕೇತ ತೋರುವ ಮೂಲಕ ಇತರರಲ್ಲೂ ಸ್ಫೂರ್ತಿ, ಹುಮ್ಮಸ್ಸು ತುಂಬಿದ್ದಾರೆ.

Edited By : Shivu K
Kshetra Samachara

Kshetra Samachara

10/12/2021 11:17 am

Cinque Terre

20.25 K

Cinque Terre

1

ಸಂಬಂಧಿತ ಸುದ್ದಿ