ಮಂಗಳೂರು: ಕಚೇರಿಗಳಲ್ಲಿ, ಕಂಪೆನಿಗಳಲ್ಲಿ ಸಿಬ್ಬಂದಿ ಹಾಜರಾತಿ ದೃಢೀಕರಿಸಲು ಬಯೋಮೆಟ್ರಿಕ್ ಬಳಸುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಆದರೆ, ಕೋವಿಡ್ ಬಳಿಕ ಈ ರೀತಿಯಲ್ಲಿ ಹಾಜರಾತಿ ನಿಭಾಯಿಸುವುದು ಕಷ್ಟಕರ. ಆದ್ದರಿಂದ ಕರಾವಳಿಯಲ್ಲಿ ಕಚೇರಿ, ಕಂಪೆನಿಗಳಲ್ಲಿ ಸುರಕ್ಷಿತ ಹಾಜರಾತಿ ವಿಧಾನ ಅನುಸರಿಸಲು ಪರ್ಯಾಯ ಮಾರ್ಗ ಅನುಸರಿಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಕರಾವಳಿಯ ಕೈಗಾರಿಕಾ ವಲಯದಲ್ಲಿ ದುಬಾರಿ ವೆಚ್ಚದ ಫೇಸ್ ರೆಕಗ್ನಿಷನ್ ಸಿಸ್ಟಮ್ ಅನುಷ್ಠಾನಕ್ಕೆ ತರಲಾಗುತ್ತಿದೆ. ನಗರದ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ (ಕೆಐಒಸಿಎಲ್) ತನ್ನ ಮಂಗಳೂರು ಕಚೇರಿಯಲ್ಲಿ ಇದನ್ನು ಕಾರ್ಯಗತಗೊಳಿಸಲಾಗಿದ್ದು, ನ.6ರಿಂದ ಇದು ಜಾರಿಗೆ ಬರುತ್ತಿದೆ. ಇದು ಕೃತಕ ಬುದ್ಧಿ ಮತ್ತೆ ವಿಧಾನದ ಅಡಿ ಕಾರ್ಯನಿರ್ವಹಿಸುತ್ತದೆ. ಕೆಐಒಸಿಎಲ್ ಮಂಗಳೂರು ಕಚೇರಿಯಲ್ಲಿ 1,500 ಕ್ಕೂ ಅಧಿಕ ಸಿಬ್ಬಂದಿಯಿದ್ದು, ಇವರು ಕಚೇರಿಗೆ ಆಗಮಿಸುವ, ನಿರ್ಗಮಿಸುವ ಸಂದರ್ಭ ಕಡ್ಡಾಯವಾಗಿ ಫೇಸ್ ರೆಕಗ್ನಿಷನ್ ಸಿಸ್ಟಮ್ ಎದುರು ನಿಲ್ಲಬೇಕು. ಆಗ ಅದರಲ್ಲಿರುವ ಕ್ಯಾಮೆರಾ, ಮುಖದ ಚಹರೆಯನ್ನು ಸ್ಕ್ಯಾನ್ ಮಾಡಿ ಕಚೇರಿಗೆ ಹಾಜರಾಗುವುದನ್ನು ಖಚಿತಪಡಿಸುತ್ತದೆ. ಆದ್ದರಿಂದ ಮೊದಲೇ ಎಲ್ಲರ ಮುಖ ಚಹರೆಯನ್ನು ಮೊದಲೇ ದಾಖಲು ಮಾಡಲಾಗುತ್ತದೆ.
ವಿಶೇಷವೆಂದರೆ ಆಗಂತುಕರು ಪ್ರವೇಶಿಸಿದ ತಕ್ಷಣ ಈ ಫೇಸ್ ರೆಕಗ್ನಿಷನ್ ಸಿಸ್ಟಮ್ ಅಲರ್ಟ್ ಸೂಚನೆ ನೀಡುತ್ತದೆ. ಅಲ್ಲದೆ, ಕೋವಿಡ್ ನಿಯಮಾವಳಿಗೆ ಪೂರಕವಾಗಿ ಈ ವ್ಯವಸ್ಥೆ ಕಾರ್ಯಗತಗೊಳಿಸಲಾಗುತ್ತದೆ.
Kshetra Samachara
05/11/2021 10:06 pm