ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಮುಂದುವರಿದ ತಪಾಸಣೆ

ಮುಲ್ಕಿ: ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಮುಂಬೈ ಸಹಿತ ಅನ್ಯ ರಾಜ್ಯಗಳಿಂದ ಬರುವ ಪ್ರಯಾಣಿಕರ ಕೋವಿಡ್ ತಪಾಸಣೆ ಮುಂದುವರೆದಿದೆ.

ಮಂಗಳವಾರ ಮುಂಬೈನಿಂದ ಬೆಳಗ್ಗೆ 8: 20 ಕ್ಕೆ ಆಗಮಿಸಿದ ಮತ್ಸ್ಯಗಂಧ ರೈಲಿನಲ್ಲಿ ಮುಂಬೈ ಸಹಿತ ಅನ್ಯ ರಾಜ್ಯ ಪ್ರಯಾಣಿಕರ ಕೋವಿಡ್ ತಪಾಸಣೆ ಕಟ್ಟುನಿಟ್ಟಾಗಿ ನಡೆದಿದೆ. ಮಂಗಳವಾರ ಅನ್ಯ ರಾಜ್ಯದ 58 ಪ್ರಯಾಣಿಕರು ರೈಲಿನಲ್ಲಿ ಆಗಮಿಸಿದ್ದು ಕೆಮ್ರಾಲ್ ಆರೋಗ್ಯ ಕೇಂದ್ರದ ಮಾರ್ಗರೇಟ್ ಸುದರ್ಶಿನಿ ನೇತೃತ್ವದಲ್ಲಿ 20 ಪ್ರಯಾಣಿಕರ ಕೋವಿಡ್ ವರದಿಯನ್ನು ನಮೂದಿಸಲಾಗಿದೆ. 38 ಪ್ರಯಾಣಿಕರ ರಾಪಿಡ್ ಟೆಸ್ಟ್ ಮತ್ತು ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಲಾಗಿದೆ.

ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ನೇತೃತ್ವದಲ್ಲಿರೈಲಿನಲ್ಲಿ ಬಂದ ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು ನಿರಂತರವಾಗಿ ನಡೆಯಲಿದೆ ಎಂದು ಅವರು "ಪಬ್ಲಿಕ್ ನೆಕ್ಸ್ಟ್"ಗೆ ತಿಳಿಸಿದ್ದಾರೆ.

ಮಂಗಳವಾರ ಮುಲ್ಕಿ ತಾಲೂಕಿನ ಹಳೆಯಂಗಡಿಯಲ್ಲಿ 2,ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿಯಲ್ಲಿ 1,ಕೊಂಡೆಮೂಲದಲ್ಲಿ 2 ಸೇರಿದಂತೆ ಒಟ್ಟು 5 ಕೋವಿಡ್ ಪೊಸಿಟಿವ್ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

10/08/2021 09:25 pm

Cinque Terre

35 K

Cinque Terre

0

ಸಂಬಂಧಿತ ಸುದ್ದಿ