ಮುಲ್ಕಿ: ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಅನ್ಯ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಕೊರೊನಾ ತಪಾಸಣೆ ನಡೆದಿದ್ದು ಈ ಸಂದರ್ಭ ಮಾತಿನ ಚಕಮಕಿ ನಡೆದಿದೆ ಹಾಗೂ ಕೆಲ ಪ್ರಯಾಣಿಕರು ಕೋವಿಡ್ ತಪಾಸಣೆಗೆ ಹೆದರಿ ಪರಾರಿಯಾದ ಘಟನೆ ನಡೆದಿದೆ
ಮುಂಜಾನೆ 8ಗಂಟೆಗೆ ಮುಂಬೈಯಿಂದ ಮತ್ಸ್ಯಗಂಧ ರೈಲಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು 56 ಜನ ಪ್ರಯಾಣಿಕರಲ್ಲಿ ಸೂಕ್ತ ದಾಖಲೆಯೊಂದಿಗೆ ಬಂದ 42 ಪ್ರಯಾಣಿಕರ ವಿವರಗಳನ್ನು ದಾಖಲಿಸಲಾಯಿತು. ಉಳಿದ 14 ಬಂದಿ ಪ್ರಯಾಣಿಕರಿಗೆ ಕೆಮ್ರಾಲ್ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಗಂಟಲು ದ್ರವ ಪರೀಕ್ಷೆ ನಡೆಸಿದರು
ಈ ನಡುವೆ ಮುಂಬೈಯಿಂದ ಬಂದ ಕೆಲ ಪ್ರಯಾಣಿಕರು ಸರಕಾರದ ನಿಯಮಗಳ ಬಗ್ಗೆ ಗೊಂದಲಕ್ಕೀಡಾಗಿ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ನಡೆಸಿದರು.ಈ ಸಂದರ್ಭ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದರೂ ಕೆಲ ಪ್ರಯಾಣಿಕರು ಸಾಮಾಜಿಕ ಅಂತರ ಪಾಲಿಸದೆ ಗುಂಪು ಗುಂಪಾಗಿ ಸೇರಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ
ಈ ನಡುವೆ ಪೊಲೀಸ್ ಸಿಬ್ಬಂದಿಯ ಕೊರತೆಯಿಂದ ಕೆಲ ಪ್ರಯಾಣಿಕರು ಕೊರೊನಾ ಪರೀಕ್ಷೆಗೆ ಹೆದರಿ ರೈಲಿನಿಂದ ಇಳಿದು ರೈಲ್ವೆ ನಿಲ್ದಾಣದ ಹಿಂಬದಿಯಿಂದ ಪರಾರಿಯಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಅನ್ಯ ರಾಜ್ಯದಿಂದ ರೈಲಿನಲ್ಲಿ ಬರುವ ಪ್ರಯಾಣಿಕರಿಗೆ ಕೊರೋನಾ ತೀವ್ರ ತಪಾಸಣೆ ಪರೀಕ್ಷೆ ನಡೆಯುತ್ತಿದ್ದು ಸ್ಥಳದಲ್ಲಿ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಒತ್ತಾಯಿಸಿದ್ದಾರೆ.
Kshetra Samachara
07/08/2021 06:24 pm