ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ನಮ್ಮನ್ನೂ ಬದುಕಲು ಬಿಡಿ" ಸಭಾಭವನಗಳ ಮಾಲೀಕರ ಒತ್ತಾಯ!

ಉಡುಪಿ: 2020 ರಲ್ಲಿ ಪ್ರಾರಂಭಗೊಂಡ ಕೋವಿಡ್ ಮತ್ತು ನಂತರದ ಲಾಕ್ ಡೌನ್ ನಿಂದ ಕಳೆದ ಅಕ್ಟೋಬರ್ ತಿಂಗಳವರೆಗೂ ಯಾವುದೇ ಕಾರ್ಯಕ್ರಮಗಳು ಪೂರ್ಣ ಪ್ರಮಾಣದಲ್ಲಿ ನಡೆಸಲಾಗಲಿಲ್ಲ.ಇದರಿಂದಾಗಿ ಸಭಾಭವನದ ಮಾಲಿಕರಾದ ನಾವು ಸಮಸ್ಯೆಗೆ ಒಳಗಾಗಿದ್ದೆವು. ಲಕ್ಷಾಂತರ ಜನ ಅಸಂಘಟಿತ ಮತ್ತು ಅವಿದ್ಯಾವಂತ ಬಡಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದೇವೆ.ಇನ್ನೇನು ಕಾರ್ಯಕ್ರಮಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ಹಂತದಲ್ಲಿ 3ನೇ ಅಲೆಯ ನೆಪದಲ್ಲಿ ಮತ್ತೆ ನಮಗೆ ತೊಂದರೆಯಾಗಿದೆ. ಸಭಾಂಗಣದಲ್ಲಿ ಮಾಡುವ ಕಾರ್ಯಕ್ರಮಗಳಲ್ಲಿ 100ರಿಂದ 200 ಜನರಿಗೆ ಮಾತ್ರ ಅನುಮತಿ ನೀಡಿರುವ ಸರಕಾರದ ಕ್ರಮ ಸಂಪೂರ್ಣ ಅವೈಜ್ಞಾನಿಕ. ಈ ನಿರ್ಧಾರದಿಂದ ಗಾಯದ ಮೇಲೆ ಬರೆ ಎಳದಂತಾಗಿದೆ. ಸಿನಿಮಾ ಮಂದಿರ ,ಪಾರ್ಕ್, ಜಿಮ್‌ ಸೆಂಟರ್‌ಗಳಲ್ಲಿ ಶೇಕಡಾ 50% ಅನುಮತಿ ನೀಡಲಾಗಿದೆ.ಆದರೆ ಸಭಾಭವನಗಳಿಗೆ ಈ ಅವಕಾಶಗಳಿಂದ ವಂಚಿತರನ್ನಾಗಿಸಿ ಮಲತಾಯಿ ಧೋರಣೆ ಮಾಡಿರುವುದು ವಿಷಾದನಿಯ.ನಮಗೂ ಶೇ.50 ನಿಯಮ ಅನ್ವಯಿಸಬೇಕು ಎಂದು ಸಭಾಭವನಗಳ ಮಾಲೀಕರು ಸರಕಾರವನ್ನು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

07/01/2022 04:29 pm

Cinque Terre

12.4 K

Cinque Terre

0

ಸಂಬಂಧಿತ ಸುದ್ದಿ