ಉಡುಪಿ: ನೆರೆ ಆವರಿಸಿದಾಗ ಜನರು ಯಾವ ರೀತಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಣಕು ಕಾರ್ಯಾಚರಣೆಯ ಮೂಲಕ ತಿಳಿಸಿಕೊಟ್ಟಿತು.
ಉಕ್ಕಿ ಹರಿಯುವ ಉದ್ಯಾವರ ಪಾಪನಾಶಿನಿ ನದಿನೀರಿನಲ್ಲಿ ಮುಳುಗುತ್ತಿರುವ ಯುವಕನನ್ನು ಎನ್ ಡಿ ಆರ್ ಎಫ್ ನ ಸಿಬ್ಬಂದಿ ಬೋಟ್ ಬಳಸಿ ರಕ್ಷಿಸಿ ತಕ್ಷಣ ವೈದ್ಯಕೀಯ ನೆರವು ನೀಡಿ ಪ್ರಾಣ ಹೇಗೆ ಉಳಿಸಬಹುದು ಎಂಬುದನ್ನು ಈ ತಂಡ ಅಣಕು ಕಾರ್ಯಾಚರಣೆ ನಡೆಸಿ ತೋರಿಸಿಕೊಟ್ಟಿತು.
ಮನೆಯ ಸುತ್ತಲೂ ನೀರು ಆವರಿಸಿಕೊಂಡಾಗ ತಕ್ಷಣ ತಮ್ಮ ಮನೆಯಲ್ಲಿದ್ದ ಸಾಮಗ್ರಿಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಪ್ರಾತ್ಯಕ್ಷಿಕೆಯೂ ನಡೆಯಿತು. ಬಿದಿರು,ಹಗ್ಗ ,ಪ್ಲಾಸ್ಟಿಕ್ ಬಾಟಲು, ತೆಂಗು, ಪ್ಲಾಸ್ಟಿಕ್ ಕೊಡಪಾನ ಹಾಗೂ ಥರ್ಮಕೋಲ್ ಬಳಸಿ ತುರ್ತು ಸಂದರ್ಭ ಹೇಗೆ ಪ್ರಾಣ ರಕ್ಷಣೆ ಮಾಡಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
Kshetra Samachara
15/12/2020 01:57 pm