ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ದೈವಾರಾಧನೆಗೆ ಅಪಮಾನ; ಟ್ರೋಲ್ ಬಳಿಕ ಪೇಜ್ ಡಿಲಿಟ್

ಮಂಗಳೂರು: ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ದೈವಾರಾಧನೆ ವಿಚಾರದಲ್ಲಿ ಅನುಚಿತವಾಗಿ ಬರೆಯಲಾಗಿದ್ದು, ಇದನ್ನು ತುಳುವಿನ ಟ್ರೋಲ್ ಪೇಜ್‌ನವರು ಟ್ರೋಲ್ ಮಾಡಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆಯು ವೆಬ್‌ಸೈಟ್‌ನಲ್ಲಿನ 'ಭೂತ ಕೋಲ' ಪೇಜ್ ಅನ್ನು ಡಿಲಿಟ್ ಮಾಡಿದೆ.

ಭೂತದ ಕೊಳ/ ಭೂತಾರಾಧನೆ ಎಂಬ ತಲೆಬರಹದಲ್ಲಿರುವ ದೈವಾರಾಧನೆ ವಿಚಾರ ವಿಚಾರ ಟ್ರೋಲ್ ಆಗಿದೆ. ಇಲ್ಲಿ ಭೂತದ ಕೋಲ ಎಂಬ ಪದವು ಭೂತದ ಕೊಳ ಎಂದಾಗಿದೆ‌. ಅಲ್ಲದೆ ಭೂತಾರಾಧನೆಯನ್ನು ದೆವ್ವದ ಆರಾಧನೆ ಎಂದು ಬರೆಯಲಾಗಿದೆ. ಭೂತಗಳನ್ನು ಪ್ರತಿನಿಧಿಸುವ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಡ್ರಮ್‌ಗಳನ್ನು ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಮೆರವಣಿಗೆ ಮಾಡುತ್ತಾರೆ. ಕತ್ತಿ ಮತ್ತು ಗಂಟೆಗಳೊಂದಿಗೆ ಕುಣಿಯುತ್ತ ನರ್ತಕಿ ತಾನು ಪ್ರತಿನಿಧಿಸುವ ದೆವ್ವದ ಅನುಕರಣೆಯಲ್ಲಿ ಸುತ್ತುತ್ತಾನೆ‌. ಉದ್ರಕ್ತವಾಗಿ ಮೇಲಕ್ಕೆ ಕೆಳಕ್ಕೆ ಹೆಜ್ಜೆ ಹಾಕುತ್ತಾನೆ ಎಂದು ಆಕ್ಷೇಪಾರ್ಹವಾಗಿ ಬರೆಯಲಾಗಿದೆ.

ತುಳುವಿನ ಟ್ರೋಲ್ ಪೇಜ್ @Tuluvas speaks ಕರ್ನಾಟಕ ಸರಕಾರದಿಂದ ತುಳುವರ ದೈವಕ್ಕೆ ಅವಮಾನ ಎಂದು ಈ ಬರಹದ ಪೇಜ್ ಅನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಿದೆ. ನಾವು ನಂಬುವ ದೈವಗಳನ್ನು, ಸತ್ಯಗಳನ್ನು ದೆವ್ವವೆಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. ಅಲ್ಲದೆ ದೆವ್ವ?, ಕತ್ತಿ?, ಕೊಳ?, ಡ್ರಮ್, ನರ್ತಕಿ? ಎಂದು ಆಕ್ಷೇಪವುಳ್ಳ ಪದ ಬಳಕೆ ಮಾಡಿದೆ. ತುಳುವರನ್ನು ಅರ್ಥ ಮಾಡಿಕೊಳ್ಳದ ದರಿದ್ರ ರಾಜ್ಯ ಬೇಕೇ ನಮಗೆ ? ಎಂದು ಪ್ರಶ್ನಿಸಿದೆ.

ಈ ಟ್ರೋಲ್ ಪೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ವೆಬ್ ಸೈಟ್ ನ ಪೇಜ್ ಟ್ರೋಲ್ ಆಗುತ್ತಿದ್ದಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಭೂತ ಕೋಲ ಎಂಬ ಪೇಜ್ ಅನ್ನು ಡಿಲಿಟ್ ಮಾಡಿದೆ.

Edited By : Vijay Kumar
Kshetra Samachara

Kshetra Samachara

25/09/2022 08:25 pm

Cinque Terre

2.95 K

Cinque Terre

0

ಸಂಬಂಧಿತ ಸುದ್ದಿ