ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೌರಕಾರ್ಮಿಕರಿಂದ ನಗರ ಸ್ವಚ್ಚವಾಗಿರಲು ಸಾಧ್ಯ: ಡಿಸಿ ಕೂರ್ಮರಾವ್ ಎಂ

ಉಡುಪಿ: ಪೌರ ಕಾರ್ಮಿಕರ ದಿನ ನಿತ್ಯದ ಚಟುವಟಿಕೆಯಿಂದ ನಗರ ಸ್ವಚ್ಚವಾಗಿರಲು ಸಾಧ್ಯ. ಮಾತ್ರವಲ್ಲ, ಉಡುಪಿ ನಗರಸಭೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ಜಿಲ್ಲೆಗೆ ಇದೊಂದು ಹೆಮ್ಮೆ. ಸಾರ್ವಜನಿಕರಿಗೆ ಸ್ವಚ್ಚತೆಯ ಬಗ್ಗೆ ಪೌರಕಾರ್ಮಿಕರು ಅರಿವನ್ನು ಮೂಡಿಸಿದ್ದಾರೆ.ಇದು ಹೀಗೇ ಮುಂದುವರೆಯಲಿ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.ಉಡುಪಿ ನಗರಸಭೆ ವತಿಯಿಂದ ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾದ ಪೌರ ಕಾರ್ಮಿಕ ದಿನಾಚರಣೆಯನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ನಗರಸಭೆ ಮತ್ತು ಹಲವು ಸಂಘ ಸಂಸ್ಥೆಗಳು ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುತ್ತಿವೆ. ಪೌರಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ತರಲಾಗಿದ್ದು ಅದರಲ್ಲೂ ವಿಮಾ ಯೋಜನೆ,ಜೀವನ ಆರೋಗ್ಯ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಪ್ರಯೋಜನವನ್ನು ಪೌರ ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗಾಗಿ ಏರ್ಪಡಿಸಲಾಗಿದ್ದ ಹಲವಾರು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು.

Edited By : Manjunath H D
Kshetra Samachara

Kshetra Samachara

23/09/2022 07:24 pm

Cinque Terre

4.2 K

Cinque Terre

0

ಸಂಬಂಧಿತ ಸುದ್ದಿ