ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ -2022ನೇ ಸಾಲಿನ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಿಗೆ ಕೊಡಮಾಡುವ ಗೌರವ ಪ್ರಶಸ್ತಿಗೆ ಮೂವರು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಮಾಹಿತಿ ನೀಡಿ, ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಎಚ್.ಎಂ.ಪೆರ್ನಾಲ್, ಕೊಂಕಣಿ ಕಲಾ ಪ್ರಶಸ್ತಿಗೆ ರಮೇಶ್ ಕಾಮತ್ ಬೆಂಗಳೂರು, ಕೊಂಕಣಿ ಜಾನಪದ ಪ್ರಶಸ್ತಿಗೆ ಕುಮುದಾ ಗಡಕರ್ ಕಾರವಾರ ಅವರು ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 18ರಂದು ಬೆಂಗಳೂರಿನ ಮಲ್ಲೇಶ್ವರಂನ ಕಾಶೀಮಠದಲ್ಲಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸದ್ಯ ಇರುವ ಕೊಂಕಣಿ ಸಾಹಿತ್ಯ ಅಕಾಡೆಮಿ ಸಮಿತಿಯ ಅಧಿಕಾರ ಅವಧಿ ಮುಂದಿನ ತಿಂಗಳಲ್ಲಿ ಮುಕ್ತಾಯವಾಗಲಿದೆ. ಅಲ್ಲದೆ ಪ್ರಸಕ್ತ ವರ್ಷವು ಡಿಸೆಂಬರ್ ವರೆಗೆ ಇರುವುದರಿಂದ ಅಲ್ಲಿಯವರೆಗೂ ಪುಸ್ತಕ ಪ್ರಕಟಣೆಗೆ ಅವಕಾಶ ಇರುವುದರಿಂದ ಪುಸ್ತಕ ಬಹುಮಾನವನ್ನು ಕೈಬಿಡಲಾಗಿದೆ. ಡಿಸೆಂಬರ್ ಬಳಿಕ ಯಾವ ಸಮಿತಿ ಅಧಿಕಾರಕ್ಕೆ ಬರುತ್ತದೋ ಅವರು ಪುಸ್ತಕ ಬಹುಮಾನದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
PublicNext
11/09/2022 10:27 am